Monday, January 26, 2009

ಕ,ಖ,ಗ, ಘ

ಕಾಕ್ಕಾ : ಚಿಕ್ಕಪ್ಪ/ದೊಡ್ಡಪ್ಪ [ತಂದೆಯ ಅಣ್ಣ/ತಮ್ಮ, ತಾಯಿಯ ಅಕ್ಕ/ತಂಗಿಯ ಪತಿ]
ಕಾಕಿ : ಚಿಕ್ಕಮ್ಮ/ ದೊಡ್ಡಮ್ಮ [ಚಿಕ್ಕಪ್ಪ/ ದೊಡ್ಡಪ್ಪನ ಪತ್ನಿ]

ಪ, ಫ, ಬ, ಭ, ಮ

ಭಾವುಶಿ : ತಮ್ಮ

ಮಾವ್ಶಿ : ಚಿಕ್ಕಮ್ಮ/ದೊಡ್ಡಮ್ಮ [ಅಮ್ಮನ ತಂಗಿ/ಅಕ್ಕ]

ಅ, ಆ, ಇ, ಈ, ಉ, ಊ, ಋ, ಎ, ಏ, ಐ, ಒ, ಓ

ಅಸ : ಹೀಗೆ
ಅಸಲ, ಅಮ್ಕ : ಇಂಥದ್ದು
ಅಳ್ಸಾಂದೆ : ಅಳಸಂದೆ
ಅನ್ಕಿ : ಇನ್ನೂ
ಅನ್ಕೇಕ : ಇನ್ನೊಂದು
ಅಗ್ರ : whitish coating that appears on the tongue
ಅಪ್ರೂಪ/ಅಪೂರ್ವ : ಅಪರೂಪ
ಅನ್ಶುದ್ಧಿ : ಎಲೆಗೆ ಭಕ್ಷ್ಯಗಳನ್ನು ಬಡಿಸುವ ಮೊದಲು ತುಪ್ಪ ಬಡಿಸುವುದು
ಅಕ್ರಾ : ಹನ್ನೊಂದು
ಅಠ್ರಾ : ಹದಿನೆಂಟು
ಅಂಸಾಣ್ಯೊ : ದೊಡ್ಡಸ್ತಿಕೆ
ಅಜ಼ುನೀ : ಇನ್ನೂ
ಅನ್ವಾಠಿ : chin
ಅ..ದೊ : ಕೋಣೆ
ಅಭಿಷೇಕು : ಅಭಿಷೇಕ
ಅಮ...ಸ : ಅಮಾವಾಸ್ಯೆ
ಅಷ್ಟಮಂಗಳಿ : ಸೀಮಂತ


ಆವಾಳೊ : ನೆಲ್ಲಿಕಾಯಿ
ಆಪ್ಲಿ : ನಮ್ಮವರು
ಆವಂತಣ : ಆಮಂತ್ರಣ
ಆಪ್ಪೆ : ಅಪ್ಪ [ಅಕ್ಕಿ, ಉದ್ದು ಹಾಗೂ ತೆಂಗಿನಕಾಯಿ ಹಾಕಿ ಮಾಡುವ ಒಂದು ರೀತಿಯ ತಿಂಡಿ]
ಆತ್ತೆ : ಅತ್ತೆ [ತಂದೆಯ ಅಕ್ಕ/ತಂಗಿ]
ಆಂಗ : ಮೈ
ಆಂಬಾಡೊ : ಅಮ್ಟೆ ಕಾಯಿ
ಆಂಬಟ್ ಘಾವನ : ಉತ್ತಪ್ಪ
ಆಂತು : ಒಳಗೆ
ಆರತಿ : ಆರತಿ
ಆಪ್ಲ್ಯಾಪ/ಆಪ್ಪಶಾ : ತನ್ನಷ್ಟಕ್ಕೇ
ಆಂದುಳೊ : ಉಯ್ಯಾಲೆ
ಆಂಧೆರ್ಲೊಸೆ 'ಪಾವೊಸು ಆಂಧೆರ್ಲೊಸೆ': ಮೋಡ ಕವಿದಿದೆ, ಮಳೆಬರುವ ಲಕ್ಷಣವಿದೆ
ಆಂಗಣ : ಅಂಗಳ
ಆಂಗರ : please suggest a kannada/english equivalent word
ಆಂದುಳವೆಚ : ತೂಗುವುದು
ಆಠ : ಎಂಟು
ಆಮ್ಡಾ: ನಮ್ಮ ಮನೆಗೆ/ನಮ್ಮ ಮನೆಯಲ್ಲಿ [ಆಮ್ಡಾ ಯಾ/ ಆಮ್ಡಾ ಆಜಿ ಆಂಬೆಂಚ ಹಶಾಳ ಸಲ ]
ಆಂಗಡಿ : ಅಂಗಡಿ
ಆಜ್ಜೊಬಾ : ಅಜ್ಜ
ಆಂತ್ಲಾದೊ/ಆಂತುಘರ : ಅಡಿಗೆಮನೆ
ಆಂಕುಡಿ : ದೋಟಿ
ಆಂಬಾಚಿ ಪೂಡಿ : ಹುಳಿ ಪುಡಿ [prepared from ಓಂಟ]

ಇಂಧಣ : ಕಟ್ಟಿಗೆ
ಇತ್ಲ : ಇಷ್ಟು
ಇತ್ಲತರೀ : ಇಷ್ಟಾದರೂ

ಉಣ : ಕಮ್ಮಿ
ಉಂಗಳ : ಕೆಟ್ಟದ್ದು
ಉರ್ವವ್ವೆಚ : ಉಳಿಸುವುದು
ಉಂಬರಾಚೊ ರೂಖು : ಔದುಂಬರ ವೃಕ್ಷ
ಉಳಸ್ತರ : ಎದೆ
ಉತ್ತರವೆಚ : ದಾಟುವುದು
ಉಪ್ರಾಂತ : ನಂತರ
ಉಬ್ಬೈರೊ : ಗಂಜಿ
ಉಪಾಕರ್ಮ : ಉಪಾಕರ್ಮ
ಉಜ್ಜ಼ವೆಚ : ಹುಟ್ಟುವುದು
ಉಕ್ಕಡ್ಗರೆ : ಹಲಸಿನ ತೊಳೆಗೆ ಒಗ್ಗರಣೆ ಹಾಕಿ ಮಾಡುವ ಒಂದು ವಿಧದ ತಿಂಡಿ
ಉಂಬಿಲೆ : ತೋಟದಲ್ಲಿ ಇರುವ ಇರುವೆ ಜಾತಿಯ ಒಂದು ಜೀವಿ

ಋಷ್ ಪಂಚಮಿ : ಋಷಿ ಪಂಚಮಿ ವ್ರತ

ಎಕಾದ್ದಾ : ಒಮ್ಮೊಮ್ಮೆ
ಎಕಕ : ಒಂದೊಂದು
ಎಕ್ಕಲೊ: ಒಬ್ಬ
ಎಕ್ಕಲಿ: ಒಬ್ಬಳು
ಎಡ್ವೋಳಾ : ಇಷ್ಟು ಹೊತ್ತಿಗೆ

ಏಕಾದಶ್ಣಿ :

ಐರವೆಚೆ 'ತಾಂದುಳ ಐರವೆಚೆ' : ಅನ್ನ ಮಾಡಲು ಅಕ್ಕಿಯನ್ನು ಬಿಸಿ ನೀರಿಗೆ ಹಾಕುವುದು


ಒಸ್ಸರೊ : ಮನೆಯ ಒಂದು ಕೋಣೆ [ದಯವಿಟ್ಟು ತಿಳಿದವರು ಸರಿಯಾದ ಕನ್ನಡ ಪದ ತಿಳಿಸಿ]
ಒಂಟಿ ಭರವೆಚಿ : ಉಡಿ ತುಂಬಿಸುವುದು
ಒಸ್ಸೆಂಗೊಟ್ಟಾ : ದಿಂಬಿನ ಪಕ್ಕದಲ್ಲಿ


ಓವಾಳವೆಚ : ಬೆಳಗುವುದು
ಓವಾಳ್ನಿ ಟಾಕ್ಕವೆಚ : ದೃಷ್ಟಿ ತೆಗೆಯುವುದು
ಓಠ : ತುಟಿ
ಓಂಟ : ಹುಳಿ ಪುಡಿ ಮಾಡಲು ಉಪಯೋಗಿಸುವ ಒಂದು ಕಾಯಿ


ಔರು : ಪ್ರವಾಹ

ತ, ಥ, ದ, ಧ, ನ

ತಪ್ಲ : ತಪಲೆ
ತರೀ : ಆದರೂ
ತಗ್ರ : ಒಂದು ಬಗೆಯ ಹೂವು
ತ...ಳ : ಕೆರೆ
ತ...ಯಿ : ತದಿಗೆ
ತಾಕ : ಮಜ್ಜಿಗೆ
ತಾಪ್ಪವೆಚ : ಬಿಸಿಯಾಗುವುದು
ತೆಲ್ಲಸಾಡಿ :
ತೊಟ್ಟ : ಅಡಿಕೆ ಹೆಕ್ಕಲು ಉಪಯೋಗಿಸುವ ಬೆತ್ತದ ಬುಟ್ಟಿ
ತೊಸ್ಸ : ಸೌತೆ
ತ್ಯೋಶಿ : ಅತ್ತೆ [ಗಂಡನ ತಾಯಿ]
ತೀನ್ಹಿ : ಮೂರು
ತೋಂಡ್ಲಿ : ತೊಂಡೆಕಾಯಿ
ತುರ್ಮುರ್‍ಯೊ : ಚುರುಮುರಿ, ಕಡ್ಲೆಪುರಿ
ತಾನ್ಹ : ಬಾಯಾರಿಕೆ
ತಾನ್ನ್ಹವೆಚ : please suggest an appropriate kannada/english meaning
ತೆಲ್ಲಾಚಿ : ಎಣ್ಣೆ ಹಾಕಿಡುವ ಪಾತ್ರೆ
ತುಪ್ಪಾಚಿ : ತುಪ್ಪ ಹಾಕಿಡುವ ಪಾತ್ರೆ
ತಳ್ಣಿ : ಎಣ್ಣೆ ಪದಾರ್ಥಗಳನ್ನು ಕರಿಯುವ ಪಾತ್ರೆ
ತಾಂಬ : ತಾಮ್ರ
ತೋ : ಅವನು
ತೀ : ಅವಳು
ತೇ : ಅವರು
ತೇವರ್ಠಿ : ಅವನಿಂದಾಗಿ, ಅದರಿಂದಾಗಿ
ತೂಪಕ್ಷಾ : ನಿನಗಿಂತ

ದಾದ್ದಾ: ತಂದೆ
ದೇವಾಂಚದೊ : ದೇವರ ಕೋಣೆ
ದಾನ : ದಾನ
ದೇಹಾರೊ : ದೇವರ ಮಂಟಪ
ದೂಖಿ : ನೋವು ದೀಂಘ : ಉದ್ದ
ದಿವಿಪಣೊಸು : ಕನ್ನಡ ಹೆಸರು ಗೊತ್ತಿದ್ದರೆ ತಿಳಿಸಿ
ದಾಕ್ಷಿಣ್ಯ : ಸಂಕೋಚ
ದಾಂಡಿ : ಬಟ್ಟೆ ಒಣಗಲು ಹಾಕುವ ಕೋಲು
ದಾಂಭೆ : ನುಗ್ಗೇಕಾಯಿ
ದಾಣೆ : ಸಾಂಬಾರಿಗೆ ಹುರಿದ ಮಸಾಲೆ
ದಾಬ್ಭಟಿ/ದಾವ್ವಟಿ : ಮಸಾಲೆ ಹಾಕದೆ, ತರಕಾರಿ ಬೇಯಿಸಿ ಒಗ್ಗರ್‍ಣೆ ಹಾಕಿ ಮಾಡುವ ಸಾರು
ದೀವೆ : ದೀಪಗಳು ಅಥವಾ ದೀಪೋತ್ಸವ
ದೂರ್ವಾ : ಗರಿಕೆ ಹುಲ್ಲು


ಧಾರ ಕಾಡ್ಢವೆಚಿ : ಹಾಲು ಕರೆಯುವುದು
ಧರವೆಚ : ಹಿಡಿಯುವುದು
ಧಾಡವೆಚ : ಕಳುಹಿಸುವುದು


ನಂಜ಼ು : ನಂಜು
ನಾಕಾ : ಬೇಡ
ನಿಸ್ತ : ಸುಮ್ಮನೆ
ನಿಬ್ಬರ : ಬಿಸಿಲು
ನೇವಾಳ : ಉಡುದಾರ
ನಿವಾತ : ಸುಮ್ಮನೆ
ನಿತ್ಯವತ: routine, ದಿನನಿತ್ಯದ ಕೆಲಸಗಳು
ನೀಗವೆಚ : ಹೊರಡುವುದು
ನಿರಾವ್ವೆಚ : ಹರಡುವುದು, ಒಣಗಲು ಹಾಕುವುದು [as in ಚಿರ್ಕುಟ ನಿರಾವ್ವೆಚಿ]
ನಿಕ್ತ : ಈಗಷ್ಟೆ