Monday, March 12, 2007

ಯ, ರ, ಲ, ವ ,ಶ

ಯೇ :ಬಾ


ರಾಗು :ಸಿಟ್ಟು,ಸಂಗೀತದ ರಾಗ
ರಸು :ರಸ
ರಸ್ಗಾಳ್ಣ : ಸೋಸುವ ಸಾಧನ
ರುಪ್ಪ* :ಬೆಳ್ಳಿ

ರುಪ್ಪಯೊ :ರೂಪಾಯಿ, ರುಪ್ಪಯೆ(ಬ)
ರೂಖು :ಮರ
ರುಖ್ಖವತ: ವರ, ವರನ ಸಂಬಂಧಿಕರಿಗೆ ಭರ್ಜರಿ ಆಹಾರ ನೀಡುವ ಕಾರ್ಯಕ್ರಮ
ರುಂದೊ :ಒಂದು ಬಗೆಯ ಪಾತ್ರೆ
ರೂಂದ :ಅಗಲ
ರೊಪ್ಪೊ :ತೆಂಗಿನ ಸಸಿ




ಲ್ಯಹ :ಬರೆ
ಲಾಡಿ : ಲಾಡಿ
ಲಾಡಿಗಿ :ಪ್ರೀತಿಯ
ಲಾವ್ವೆಚ :ಹಚ್ಚುವುದು
ಲಸೂಣಿ: ಬೆಳ್ಳುಳ್ಳಿ
ಲ್ಹಾನ :ಸಣ್ಣ(ನ) ,ಲ್ಹಾನು(ಪು) , ಲ್ಹಾನಿ (ಸ್ತ್ರೀ)
ಲೂಹ :ಒರಸು
ಲಾಗ್ಗಿ :ಹತ್ತಿರ
ಲೇಪು :ಮುಸುರೆ
ಲೊಕ್ಕರಿ :ಬೇಗ
ಲೋಣಿ :ಬೆಣ್ಣೆ
ಲೋಣ್ಚ :ಉಪ್ಪಿನಕಾಯಿ



ವರು : ವರ
ವರ್ಖ : ವರ್ಷ
ವರ್ತ :ಮೇಲೆ
ವಯಿ :ಬೇಲಿ
ವರ್ ಹಾಡ/ವರಾಢ : ಮದುವೆ
ವಂಶು : ವಂಶ
ವರಿ : ವಧು
ವಹವ್ವೆಚ : ಹೊರುವುದು


ವಾಳಿ :ಬಸಳೆ, ಬಸಿಯು
ವಾಳುವಿ : ಗೆದ್ದಲು
ವಾಳು :ಮರಳು
ವೇಳು :ಬಿದಿರು, ಹೊತ್ತು
ವಾಚ್ಚವೆಚ :ಓದುವುದು
ವಾಢಿ : ಬಡ್ಡಿ, ಬಡಿಸು
ವಾಂಕುಡ :ವಕ್ರ
ವಾತ್ತಡ : dont know exact kannda word
ವಾಡಿ :ತೋಟ
ವಾತ್ತಿ :ಬತ್ತಿ
ವಾಟ್ಟಿ :ತಟ್ಟೆ
ವಾಟ್ಟುಳಿ : ದುಂಡನೆಯ ಸಣ್ಣ ಪಾತ್ರೆ,bowl
ವಾಘು :ಹುಲಿ
ವಾರೊ :ಗಾಳಿ
ವಾಟ : ದಾರಿ
ವಾಟ್ಟವೆಚ :ರುಬ್ಬುವುದು

ವಿದ್ಯಾ :ವಿದ್ಯೆ
ವಿಸ್ತವಣ :ಒಗ್ಗರಣೆ
ವಿಸ್ತವಣಿ :
ವೀರಿ :ಅಡಿಕೆ ಹಾಳೆ
ವೀಣಿ :ಜಡೆ

ವ್ಯಹಿ : ಬೀಗ
ವ್ಯಹಿಣಿ :ಬೀಗಿತ್ತಿ
ವೀಡೊ : ವೀಳ್ಯ

ವಿರ್ಮಾರ : dont know the exact word in kannada..update me if anyone knows.
ವೆಚ್ಚವೆಚ :ಮುಗಿಸುವುದು (ಖರ್ಚು ಮಾಡುವುದು)
ವೇಶ್ಟಿ : ಧೋತಿ
ವೊಹೊನಿ :ಅತ್ತಿಗೆ

ಶಾಕ :ಪದಾರ್ಥ( ಸಾಂಬಾರು,ಪಲ್ಯ ಇತ್ಯಾದಿ)
ಶಿಂದವೆಚ :ಹೆಚ್ಚುವುದು
ಶಿಂಟವೆಚ :ಸಿಡಿಯುವುದು ( ಉದಾ :ಚಿಖ್ಖೊಲು ಶಿಂಟವ್ವೆಚೊ :ಕೆಸರು ಸಿಡಿಸುವುದು )
ಶಿಕ್ರೀಣಿ :ರಸಾಯನ
ಶೀತ :ಶೀತ
ಶಿವ್ವೆಚ : ಹೊಲಿಯುವುದು

ಚ,ಛ ,ಜ.ಝ

ಚ..ರ :ಮೇಯು
ಚಮ್ಚೊ :ಚಮಚ
ಚನ್ನಮಣ್ಣ :ಚೆನ್ನೆಮಣೆ ಆಟ
ಚಾರಿ :ನಾಲ್ಕು
ಚಾಲ :ಕೆಚ್ಚಲು, ನಡಿ
ಚಾಂದು :ಚಂದ್ರ
ಚಾತ್ತಿ :ಕೊಡೆ
ಚಟ್ಟು :ಮೆಣ್ಸುಕಾಯಿ ( ಒಂದು ರೀತಿಯ ಸಾಂಬಾರು)
ಚಾರಿ :ನಾಲ್ಕು
ಚಾರ್ಖಂಡ:
ಚಾಟ್ಟವೆಚ :ನೆಕ್ಕುವುದು
ಚಾಪೊ:ಚಾಪೆ
ಚಿಮ್ಮುಟೊ: ಚಿಮ್ಮಟಿಗೆ
ಚಿರ್ಕುಟ :ಬಟ್ಟೆ
ಚಿಂಚಿವ್ವೆಚ :ಉರಿಯುವುದು
ಚಿರ್ಮಾಯಿಜವೆಚ :ಮುರುಟು
ಚಿತ್ತಳ :ಜಿಂಕೆ
ಚಿಪ್ಪ : ಕೆಸುವಿನ ಬೇರು ( ತರಕಾರಿಯಾಗಿ ಬಳಕೆ)
ಚಿಖ್ಖೊಲು :ಕೆಸರು
ಚಿಚ್ಚಿ : ಮಲ (ಬಾಲಭಾಷೆಯಲ್ಲಿ)
ಚೀಂಚ :ಹುಳಿ
ಚುನ್ನೊ :ಸುಣ್ಣ
ಚೂಡಿ : ಸೂಡಿ

ಚೆಂಡೊ :ಚೆಂಡೆ
ಚೇ..ಪಿ:ಒತ್ತು
ಚೇಡೊ :ಕೆಲಸದವನು ಚೇಡೆ (ಬ)
ಚೊಹೊಡಿ: pls suggest kannada word
ಚೊಂಫವೆಚ:ಚೀಪುವುದು
ಚೊಂಥೊ: pls suggest kannada word

ಚೋರು :ಕಳ್ಳ,ಚೋರಿಣಿ,ಚೋರ್ಟಿ ( ಸ್ತ್ರೀ)
ಚೋಳಿ:ರವಕೆ
ಚೌಲ: ಚೂಡಾಕರ್ಮ
ಚೌಖಂಡ:


ಛೀಂಕ :ಸೀನು(ನಾ) ,ಛೀಂಕವೆಚ:(ಕ್ರಿ)

ಜಂಬಾರ: ಸಮಾರಂಭ, ಕಾರ್ಯ
ಜವ್ಳಿ :ಜವುಳಿ
ಜಾನ್ಹು :ಜನಿವಾರ
ಜಾಂಬಿರ :pls suggest kannada word
ಜಾಂಭವಿ :ಆಕಳಿಕೆ
ಜಾಯಿವೆಚ :ಹೋಗುವುದು
ಜಾಂಬು :ಜಂಬುನೇರಳೆ
ಜಾಯಿಫೂಲ :ಜಾಜಿ ಹೂವು
ಜಾಯಿಫಳ :ಜಾಯಿ ಕಾಯಿ
ಝಗ್ರ :ಕೆಂಡ
ಜಗ್ರೆಚೊ ಇಂಧೊ :ಕೆಂಡದ ಒಲೆ
ಜುನ್ನವ್ವೆಚ :ಬಲಿಯುವುದು






ಜಾಲ : ಆಯಿತು
ಜೆವಣ :ಊಟ
ಜಿಡ್ಡು : ಜಿಡ್ಡು
ಜುವೆಳಿ : ಅವಳಿ ಜವಳಿ
ಜಾಯಿಫಳ :ಜಾಯಿಕಾಯಿ
ಜಾವೈಶಿ: ಅಳಿಯ
ಜಾಯಿವೆಚ :ಹೋಗುವುದು
ಜಾಗ್ಗವ್ವೆಚ :ಎಚ್ಚರವಾಗುವುದು

ಝರು :ಜ್ವರ
ಝೂನ :ಬಲಿತ
ಝಳಾರಿ :ಸೊಳ್ಳೆ
ಝಾಲ :ಆಯಿತು
ಝಾ..ರೊ :ತೂತಿರುವು ಸೌತು
ಝೇಮಿ :ತೂಕಡಿಕೆ
ಝೀಂಪಿ:ತೂಗುವಿಕೆ
ಝೇವು ಜಾಣ:ಭೋಜನಕ್ಕೆ ಹೋಗುವಿಕೆ

ಎ,ಏ,ಐ, ಒ,ಓ

ಎಠಾ : ಇಲ್ಲಿ
ಏದಾ : ಒಮ್ಮೆ
ಎವ್ಠಿ : ಇತ್ತೀಚೆಗೆ
ಎಡ್ವೋಳಾ : ಇಷ್ಟು ಹೊತ್ತಿಗೆ
ಏಕ : ಒಂದು
ಏಳಾ:ಏಲಕ್ಕಿ


ಐರಾಮಾನ್ಹಾಣ : ?

ಒಕ್ಖತ :ಮದ್ದು
ಒವೆಳಿ :ರಜಸ್ವಲೆ
ಒವೆಳ-ಸೊವೆಳ : ಮೈಲಿಗೆ-ಮಡಿ
ಒಲ್ಲ* : ಒದ್ದೆ
ಒಲ್ಲಿ ಮಿರ್ಸಾಂಗ :ಹಸಿ ಮೆಣಸು
ಒಳತಿ :ಗೋಡೆ
ಒಂಗಳ :ಕೆಟ್ಟ
ಒಶ್ಶಿಸ":ತಲೆದಿಂಬು
ಒಡ್ಡವೆಚ* :ಎಳೆಯುವುದು
ಓಢಿ :ಸೆಳೆತ

ಹ( updated )

ಹರ್ವಾಣ : ಹರಿವಾಣ
ಹಳು :ನಿಧಾನ
ಹದಾ : ಹದ
ಹಗು :ಮಲ
ಹಳದಿ : ಅರಸಿನ
ಹುಳ್ವ : ಅಲುಗಾಡು
ಹಯಿ :ಹೌದು
ಹರ್ವ:ಕಾಯಿ (ಹಣ್ಣಾಗದ್ದು)
ಹತ್ತಿ :ಆನೆ
ಹಂಚು :ಹಂಚು
ಹಸವೆಚ :ನಗುವುದು
ಹಶಾಳ*:ಮಾವಿನ ರಸಾಯನ
ಹರ್ವಾಳ : ಹಗುರ
ಹಳ್ದುಗ್ಡ :ಅರಸಿನದ ಕೊಂಬು
ಹರಿ :ನಮಸ್ಕಾರ
ಹರ್ತಾಳಿಕಾ :ಚೌತಿಯ ಸಮಯದಲ್ಲ್ಲಿ ಸ್ತ್ರೀಯರು ಮಾಡುವ ವ್ರತ
ಹಾಲ್ಲಡಿ: ಕಂಕುಳಲ್ಲಿ ಎತ್ತಿಕೊಳ್ಳುವುದು ( ಬಾಳಾಲ ಹಾಲ್ಲಡಿ ಘೆವೆಚ :ಮಗುವನ್ನು ಕಂಕುಳಲ್ಲಿ ಎತ್ತಿಕೊಳ್ಳುವುದು.
ಹೈರ :ಸರಿ

ಹಿಂಡೊ : ಕಡಿಮೆ ಅವಧಿಯ ಭೇಟಿ
ಹಿರಿಡಿ:ಒಸಡು
ಹೀವ :ಚಳಿ
ಹೀವಾಳಿ :ಚಳಿಗಾಲ


ಹೂಂಗ :ಮೂಸುವುದು
ಹೋಳವೆಚ :ಒಗೆಯುವುದು
ಹಾಡವೆಚ :ತರುವುದು
ಹಾಪ್ಪಟವೆಚ :ತಾಗುವುದು

ತ,ಥ,ದ ,ಧ ,ನ

ತಸತೆ :ಹಾಗಾದರೆ
ತಸಲೆಲಾ:ಅಂಥದ್ದಕ್ಕೆ
ತಸ :ಹಾಗೆ
ತಮಗ :ಹಾಗಾದರೆ
ತಸ್ತೆ :ಹಾಗಾದರೆ
ತಿತ್ಲೆಕಾಂಧಾ : ಅಷ್ಟು ಹೊತ್ತಿಗೆ
ತೆಲ್ಕಟ : ಎಣ್ಣೆ ಮಯ
ತಳ್ವಣ :ಎಣ್ಣೆ ತಿಂಡಿ
ತಿಖ್ಖಟ :ಖಾರದ್ದು




ತಾಂದುಳ :ಅಕ್ಕಿ
ತೀರ್ಥ :ತೀರ್ಥ
ತೀಳು :ಎಳ್ಳು
ತಾಳಿ :ತಾಳಿ
ತೋಂಡ : ಮುಖ
ತೂ : ನೀನು
ತುಮ್ಹಿ :ನೀವು
ತೂಲಾ:ನಿನಗೆ
ತುಜ್ಹ :ನಿನ್ನ
ತೇಲಾ:ಅವನಿಗೆ
ತ್ಯಾಲಾ:ಅವಳಿಗೆ
ತೆಗ್ಡಾ : ಆ ಕಡೆ
ತೆಢ್ಲಾ :ಆಗ
ತೇವರ್ಠಿ :ಅವನಿಂದಾಗಿ,ಅದರಿಂದಾಗಿ, ತ್ಯಾವರ್ಠಿ :ಅವಳಿಂದಾಗಿ
ತೇಲಾಚ್ಚಿ :ಅವನಿಗೇ
ತ್ಯಾಹಾ : ಅಲ್ಲಿ
ತೂಪ : ತುಪ್ಪ
ತೇಲ : ಎಣ್ಣೆ
ತಾಂಬುಲ : ತಂಬಿಗೆ
ತಾಂಬ್ಯೊ : ತಂಬಿಗೆ
ತಾಂಬಿಡೊ :ಕೆಂಪು

ಥುಂಕಿ :ಎಂಜಲು
ಥುಂಕವೆಚ :ಉಗುಳುವುದು
ಥೋಡ :ಸ್ವಲ್ಪ
ಥಂಡ :ತಣ್ಣನೆಯ
ಥಾಂಬವೆಚ :ನಿಲ್ಲುವುದು

ದಹಿ :ಮೊಸರು

ದಾರ :ಬಾಗಿಲು
ದೋರಿ :ಹಗ್ಗ
ದೋನಿ :ಎರಡು
ದೂಧ :ಹಾಲು
ದುದ್ಧೌಣಿ :ಹಾಲು ನೀರು
ದೇವು :ದೇವರು
ದಾಳಿ :ಬೇಳೆ
ದಾಂತು : ಹಲ್ಲು, ದಾಂತ (ಬ)
ದುಧ್ಯೊ ;ಚೀನೀಕಾಯಿ
ದುಪ್ಪಾರಿ :ಮಧ್ಯಾಹ್ನ
ದೇವು :ದೇವರು
ದೇವೆಚ :ಕೊಡುವುದು
ದುಪ್ಪಟ : ಎರಡು ಪಟ್ಟು
ದೀವೊ:ದೀಪ
ದಾಂಡೊ :ಕೋಲು


ಧಡಿ :ಸೀರೆ
ಧಾಕ್ಕುಟ : ಮಗು , ಧಾಕ್ಕುಟಿ :ಮಕ್ಕಳು
ಧುಂಕೊಟು :ಹೊಗೆ
ಧೂಳಿ :ಧೂಳು
ಧಾವ :ಓಡು
ಧಾರ ಕಾಡ್ಡವೆಚಿ: ಹಾಲು ಕರೆಯುವುದು
ಧುವಣ:ಅಕ್ಕಿ ತೊಳೆದ ನೀರು
ಧುವಣ ಕಾಡ್ಢವೆಚ :ಅಕ್ಕಿಯನ್ನು ನೀರಿನಿಂದ ತೊಳೆಯುವುದು
ಧೋವ :ತೊಳೆ
ಧೋವೊ :ಬಿಳಿ




ನವರೊ :ಗಂಡ
ನವರಿ :ಹೆಂಡತಿ
ನವ :ಹೊಸ, ಹೊಸ ಅಕ್ಕಿ ಊಟ
ನಾಂಖುಟ : ಉಗುರು
ನಾರ್ಯೊಳು :ತೆಂಗಿನ ಕಾಯಿ
ನಾವ :ಹೆಸರು
ನಾಜೂಕ :ನಾಜೂಕು
ನಾಗ್ಗುಡ :ಬೆತ್ತಲೆ
ನಾಚ್ಚ ವೆಚ : ನರ್ತಿಸುವುದು
ನಿರ್ಮಾಲ್ಯ :ದೇವರಿಗೆ ಅರ್ಪಿಸಿದ ಹೂವು, ಪತ್ರೆ ಇತ್ಯಾದಿಗಳು ಅರ್ಪಿಸಿದ ಮರುದಿನಕ್ಕೆ ಈ ಹೆಸರು ಪಡೆಯುತ್ತವೆ.
ನೀದ :ನಿದ್ದೆ
ನೀವ :ತಣಿ ( ಕ್ರಿಯಾಪದ), ಮಾಡು (roof ) ನಾಮಪದ
ನರ್ವಾಂಟೆಳೊ : ಚೊರೆ (dont know proper kannada word .pls suggest)
ನುನ್ನು :ಹಾಲು (ಬಾಲ ಭಾಷೆ)
ನಿನ್ನಿ : ನಿದ್ಧೆ(ಬಾಲ ಭಾಷೆ)
ನಿಶಿಣಿ :ಏಣಿ
ನಿತ್ಯ :ನಿತ್ಯ
ನೋಹೆ : ಅಲ್ಲ
ನೊಕಾ :ಅಲ್ಲವೆ?
ನೇವೆಚ :ಕೊಂಡೊಯ್ಯುವುದು
ನೀಲಾಂಜನ :ಸಣ್ಣ ದೀಪ
ನಿಜ್ಜಪವೆತ್ಸ : ಅಚ್ಚುಕಟ್ಟು ಮಾಡು (dont know proper kannada word .pls suggest)
ನಿದಳ :ಹಣೆ
ನಿತ್ತಳ :ನಯವಾದ
ನಾಂಕ :ಮೂಗು

ಸೆ : ( ಇದರ ಉಚ್ಚಾರ ಕೊಂಚ ಭಿನ್ನ ) ತ್ಸೆ ಎನ್ನುವುದು ಸರಿ ಎಂದನಿಸುತ್ತದೆ. : ಇದೆ



ಸಸೆ :ಇರುತ್ತದೆ
ಸವಾಶಿಣಿ :ಮುತ್ತೈದೆ
ಸಲ :ಇತ್ತು
ಸೂಣ :ನಾಯಿ
ತ್ಸೇಪ :ಬಾಲ
ಸಂಧ್ಯಾ :ಸಂಧ್ಯಾವಂದನೆ
ತ್ಸಾಹಿ : ನೆರಳು
ಸಾಂಝಾ :ಸಂಜೆ
ಸೂಯಿ :ಸೂಜಿ
ಸತಾ :ಇದ್ದಾಗ
ಸತ್ಯ :ಸತ್ಯ
ಸಹಾ : ಕೆನೆ,ಕೂಡ
ಸುರೇಖ : ಸುಂದರ
ಸಾಸ್ಸುರ : ಗಂಡನ ಮನೆ
ಸಾಸ್ರೆವಾಸು :ಕಿರುಕುಳ
ಸಸೂತ್ರ : ಸಸೂತ್ರ
ಸಮೂರಿ :ಮುಂದೆ
ಸ..ರಿ:ಸರಿಗೆ
ಸಾರಿಖ : ರೂಪ
ಸಾರವ್ವೆಚ:ಸಾರಿಸುವುದು
ಸಾಂದಣ :ಕಡುಬು
ಸಾಣ:ತೀಡಲು ಬಳಸುವ ಕಲ್ಲು ( ಉದಾ:ಗಂಧಾಚ ಸಾಣ :ಗಂಧ ಅರೆಯುವ ಕಲ್ಲು

ಸಾರ :ಸಾರು
ಸಾರಿಖ'' :ರೂಪ
ಸಾರ್ಖೊತು :ಬೂದಿ

ಸುನ್ನಶಿ :ಸೊಸೆ
ಸುಜ್ಜ*ವೆಚ*'' :ಬಾತುಕೊಳ್ಳುವುದು
ಸುಹೇರು :ಕುಟುಂಬದಲ್ಲಿ ಯಾರಾದರೂ ಹುಟ್ಟಿದರೆ ೧೦ ದಿನಗಳ ಕಾಲ ಪೂಜೆ,ಪುನಸ್ಕಾರಗಳಿರುವುದಿಲ್ಲ..ಅದನ್ನು ಸುಹೇರು ಎನ್ನುತ್ತಾರೆ
ಸೂತಕ :ಕುಟುಂಬದಲ್ಲಿ ಯಾರಾದರೂ ಸತ್ತರೆ ೧೦ ದಿನಗಳ ಕಾಲ ಪೂಜೆ,ಪುನಸ್ಕಾರಗಳಿರುವುದಿಲ್ಲ..ಅದನ್ನು ಸೂತಕ ಎನ್ನುತ್ತಾರೆ
ಸೂಜಿ :ಬಾವು


ಸಮಾನ: ಸರಿ
ಸೊಕ್ಕಿ ಕರವೆಚ :ನೆಲ ಒರಸುವುದು
ಸಾಪು: ಸರ್ಪ
ಸಾಂಭಾರ : ಒಂದು ರೀತಿಯ ಸೊಪ್ಪು
ಸಾಂಭಾರೊಟ್ಯ : ಸಾಂಭಾರ ಪದಾರ್ಥ ಗಳನ್ನು ಇಡುವ ಪೆಟ್ಟಿಗೆ
ಸಾಂಥ :ಸಂತೆ
ಸಾಂದಿಪಣ :ಕಟ್ಟಿಗೆ
ಸಾಗಕ್ಕಿ :ಸಾಗಕ್ಕಿ

ಸಾಖ್ಖರ :ಸಕ್ಕರೆ
ಸುಖ್ಖಿ :ಪಲ್ಯ
ಸುಂಠೊ:ಚಿವುಟಿವಿಕೆ, ಸುಂಠೊ ಕಾಡ್ಡವೆಚೊ: ಚಿವುಟುವುದು


ಸೂರಿ :ಚೂರಿ
ಸುಖ್ಖ'' :ಒಣ
ಸುಖ್ಖವ್ವೆಚ :ಒಣಗಿಸುವುದು
ಸುರೈ :ಬೆಳ್ತಿಗೆ
ಸೂತ :ನೂಲು

ಸೇವ್ಯೊ :ಸೇಮಿಗೆ
ಸೇಸ ಲಾವ್ವೆಚ* '':ಗಂಧ ಮತ್ತು ಅಕ್ಷತೆಯನ್ನು ಸ್ತ್ರೀಯರ ಹಣೆ ಮತ್ತು ಮೂಗಿನ ಮಧ್ಯಭಾಗಕ್ಕೆ ಹಚ್ಚುವ ಕ್ರಿಯೆ
ಸೇಸ-ಕುಂಕು :ಗಂಧ ಮತ್ತು ಅಕ್ಷತೆಯನ್ನು ಸ್ತ್ರೀಯರ ಹಣೆ ಮತ್ತು ಮೂಗಿನ ಮಧ್ಯಭಾಗಕ್ಕೆ ,ಮತ್ತು ಕುಂಕುಮವನ್ನು ಹಣೆಗೆ ಹಚ್ಚುವುದು
ಸೂರ್ಯು :ಸೂರ್ಯ


ಸಪಾದ :ಸತ್ಯನಾರಾಯಣ ಪ್ರಸಾದ
ಸಳಾಥಿ :ಹಿಡಿಸೂಡಿ
ಸಾಟ್ಠಿವ :೬೦ ನೇ ಜನ್ಮದಿನಾಚರಣೆ
ಸಾತ್ತರ್ಯವ :೭೦ನೇ ಜನ್ಮ ದಿನಾಚರಣೆ
ಸೋಂಢ :ಸೊಂಡಿಲು
ಸಾಟ್ಟಿ : ಕಡುಬು ಮಾಡುವ ಪಾತ್ರೆ
ತ್ಸಾತ್ತಿ :ಕೊಡೆ
ಸಾಠ್ಠಿ :ಕ್ಕೋಸ್ಕರ (ಪ್ರಯೋಗ : ತೇ ಸಾಠ್ಠಿ : ಅದಕ್ಕೋಸ್ಕರ )
ಸತಾ :ಇರುವಾಗ
ಸೋಡಿ :ಬಿಡು, ಸೋಡವೆಚ :ಬಿಡುವುದು
ಸೋಡ್ಲ : ಹಣತೆ, ಬಿಟ್ಟೆ
ಸೋಂಢ :ಸೊಂಡಿಲು
ಸ್ವ್ಯಯ : ಪ್ರಜ್ ನೆ

ಟ ,ಠ ,ಡ ಢ

ಟಿವ್ಳ:ದೀಪಾವಳಿ ಸಮಯದಲ್ಲಿ ಉರಿಸುವ ಹಣತೆ

ಡುಕ್ಕೊರು :ಹಂದಿ
ಡಾವ :ಎಡ
ಡಾವುಕುರೊ :ಎಡಚರ
ಢಾಂಕಿ :ಮುಚ್ಚು
ಢಾಂಕಣ :ಮುಚ್ಚಳ
ಢೆಕ್ಕಿರ :ತೇಗು
ಡೊಗ್ಗೊರು : ಗುಡ್ಡ
ಡೊಯಿ :ಗಂಡಸರ ತಲೆ
ಡೊಹೆಳೆ :ಬಸುರಿಯಾದಾಗ ಆಗುವ ಅನಾರೊಗ್ಯ
ಡೊಂಗಳೊ : ದೊಡ್ಡ ಇರುವೆ
ಡೇವ್ವೆಚ :ಇಳಿಯುವುದು
ಢೊಂಪರ :ಮಂಡಿ ಚಿಪ್ಪು
ಢೊಮ್ಮಳ : ದಪ್ಪ (ಢೊಮ್ಮೊಳು(ಪುಲ್ಲಿಂಗ), ಢೊಮ್ಮಳಿ(ಸ್ತ್ರೀ)

ಕ,ಖ,ಗ,ಘ

ಕಳ್ಸೂತ :ಹತ್ತಿಯ ನೂಲು ( ದೇವರ ಪೂಜೆಗೆ ಬಳಸಲಾಗುತ್ತದೆ )
ಕಡ್ಗುಲ :ಬಳೆ , ಕಡ್ಗುಲಿ :ಬಳೆಗಳು
ಕರಿ:ಮಾಡು
ಕರವೆಚ :ಮಾಡುವುದು
ಕರಾನ್ನೊ :ಬ್ರಾಹ್ಮೀ ಎಲೆ,ಒಂದೆಲಗ
ಕರ್ದಟೊ :ಉಡಿದಾರ
ಕರ್ಬೇವು :ಬೇವು
ಕಸ :ಹೇಗೆ
ಕ..ಯಿ : ಯಾವಾಗ
ಕ..ಣೆ :ರಂಗೋಲಿ
ಕ..ಣಿ :ನೀರು ಹರಿಯುವ ಜಾಗ, ಸಾಂಬಾರಿಗೆ ರುಬ್ಬಿದ ಮಸಾಲೆ



ಕೋಳಿ :ಜೇಡ
ಕುಛ್ಛಿ :ಮಗ್ಗುಲು
ಕುಳಿಥ :ಹುರುಳಿ
ಕಾಣಿಕ :ಕಾಣಿಕೆ
ಕಾಥ್ಠೊಡ್ಲಿ :ದೊಡ್ಡ ಪಾತ್ರೆ.
ಕಾಹೆಲಿ :ಕಾವಲಿ
ಕೂವೊ: ಅರಾರೂಟ್
ಕೆಪ್ಪೊ:ಕಿವುಡ
ಕುರ್ಡೊ:ಕುರುಡ



ಕಾಕ್ಕವಿ : ಹಲಸಿನ ಹಣ್ಣಿನ ಜಾಮ್
ಕಾಜ್ಜಾಂಬೊ :ಗೇರು ಹಣ್ಣು
ಕಾಜ್ಜುಬಿ :ಗೇರು ಬೀಜ
ಕಾಪ್ಪೊಸು :ಹತ್ತಿ
ಕಾವುಳೊ : ಕಾಗೆ
ಕಾರೆತ :ಹಾಗಲಕಾಯಿ
ಕಾಳಿಂಬಿ : ಮಳೆ ಬರುವ ಮುಂಚೆ ಕವಿಯುವ ಕತ್ತಲು
ಕಾಳೊಖು :ಕತ್ತಲೆ
ಕವುಳಾಸವೆಚ: ನಿರ್ಮಾಲ್ಯ ಇತ್ಯಾದಿಗಳನ್ನು ಯಾವುದಾದರೂ ಗಿಡದ ಬುಡದಲ್ಲಿ ವಿಸರ್ಜಿಸುವುದು.
ಕಾಮ :ಕೆಲಸ
ಕಾಮ್ಮಾಚಿ : ಕೆಲಸದವಳು
ಕಾನು :ಕಿವಿ
ಕಾವುಳೇಸು : ಕಾಗೆಗೆ ನೀಡುವ ನೈವೇದ್ಯ
ಕಾಸ :ಕಚ್ಚೆ
ಕಾಲಿ :ನಿನ್ನೆ
ಕಾಂಡುವ್ವೆಚ : ತುರಿಸುವುದು
ಕಾಯ್ಯೆಕ : ಏನೂ

ಕಿಲ್ಲಾ :ಯಾಕೆ

ಕಿರ್ಡುವ : ಹಾವು
ಕಿತ : ಏನು
ಕಿಲ್ಲಾ :ಯಾಕೆ
ಕೀಚು. : ಅಂಟು

ಕೆತ್ತಿ :ಎಷ್ಟು

ಕುಡ್ಬುದ್ಧಿ : ಕೆಟ್ಟ ಬುದ್ಢಿ
ಕುಮಾಂತ್ರ: ಮಾವಿನ ಹಣ್ಣಿನ ರಸವನ್ನು ಒಣಗಿಸಿ ಮಾಡುವ ವಸ್ತು
ಕುಸ್ಸಕ :ಕೊಳೆತ
ಕೆತ್ತಿ :ಎಷ್ಟು
ಕೆಡ್ವೋಳಾ: ಎಷ್ಟು ಹೊತ್ತಿಗೆ
ಕೇ :ಎಲ್ಲಿ
ಕೇಂಧಾಲಾ:ಎಲ್ಲಿಗೆ
ಕೇಸ :ಕೂದಲು
ಕೇರು :ಕಸ



ಕೈಲಾಥೊ : ದೋಸೆ ಎಬ್ಬಿಸುವ ಸೌಟು
ಕೈಮರ್ಗಿ: ಹಿಡಿಯುಳ್ಳ ಪಾತ್ರೆ
ಕೊಹೆಳೊ :ಕುಂಬಳಕಾಯಿ
ಕೊವೆಳ :ಎಳೆಯ
ಕೋಶಿಂಬ್ರಿ :ಕೋಸಂಬರಿ
ಕೊಂಣ್ತೆಗ್ಡಾ :ಯಾವ ಕಡೆ
ಕೋಂಬು : ಕಣಿಲೆ, ಎಳೆ ಬಿದಿರು
ಕೊಣ್ಹಿ :ಯಾರು
ಕೊಇತಿ : ಕತ್ತಿ



ಖರ್ಭರಿತ :ದೊರಗು
ಖಲ್ವಾಟ : ಸಾಣೆ ತಲೆ
ಖಣ : ರವಿಕೆಯ ಬಟ್ಟೆ( ನಾ) , ಅಗೆಯು (ಕ್ರಿ)

ಖರ್ವಡವೆಚ :ಕೆರೆಯುವುದು
ಖರೊಕ್ಕಾವ್ವೆಚ : ತುರಿಕೆ
ಖಾ :ತಿನ್ನು
ಖಾಖ : ಕಂಕುಳು
ಖಾಯಿವೆಚ :ತಿನ್ನುವುದು
ಖಾಸಾ:ಖಾಸಾ
ಖಾಲ್ಲ* :ಹಾಸಿಗೆ
ಖಾತ :ಕೊಳೆ
ಖೀರಿ :ಪಾಯಸ
ಖಬ್ರಿ : ಪಟ್ಟಾಂಗ
ಖುಳ್ಖುಳಾವ್ವೆಚ :ಮುಕ್ಕಳಿಸುವುದು

ಖೂಣ :ಗುರುತು,ಪರಿಚಯ
ಖೂಳ :ಹುಚ್ಚು
ಖೂಳೊ :ಹುಚ್ಚ ,ಖುಳಿ :ಹುಚ್ಚಿ
ಖೊಬ್ಬರ: ಕೊಬ್ಬರಿ
ಖೊಖ್ಖುಲೊ:ಕೆಮ್ಮು
ಖೋಟ :?
ಖೇಳು :ಆಟ


ಗಹ್ರ್ವಾರಿ : ಬಸುರಿ
ಗರೊ: ಹಲಸಿನ ಹಣ್ಣಿನ ಸೊಳೆ( ಗರೆ : ಪುಲ್ಲಿಂಗ)
ಗಡೂಸು :ಬುದ್ಧಿವಂತ ಗಡೂಶಿ ( ಸ್ತ್ರೀ) ,ಗಡೂಸ ( ನ)
ಗಳೊ :ಕುತ್ತಿಗೆ
ಗಾಳಿ :ಬೈಗುಳ
ಗಾಯಿ :ದನ
ಗಾಂಡಿ :ಅಂಡು
ಗಾಯಿರ :ಆಲಿಕಲ್ಲು
ಗಾಜಿ : ಗುಡುಗು
ಗಾಡ್ಢವ :ಕತ್ತೆ
ಗೋರು :ಪಶು
ಗೋರ : ಬಿಳಿ
ಗಾವು :ಊರು
ಗಾಗ್ಗುರಿ :ತರಾತುರಿ
ಗೂಣು :ಗುಣ


ಘರ :ಮನೆ
ಘರಣ :ಮನೆತನ
ಘರಿಘವ್ಣಿ: ಗೃಹಪ್ರವೇಶ
ಘನಘಡಿತ :ಗಟ್ಟಿಮುಟ್ಟು
ಘಣ :ದಪ್ಪ
ಘಸ್ರವೆಚ :dont know exact kannada word for this..pls suggest
ಘಾಘ್ಘರಿ :ಗೆಜ್ಜೆ
ಘಾಮು:ಬೆವರು
ಘಾಮ್ಮೆಳ:ಬೆವರುಸಾಲೆ
ಘಾವನ :ದೋಸೆ
ಘಾಸು:ತುತ್ತು


ಘಾಲ್ಲವೆಚ :ಹಾಕುವುದು
ಘಾಣಿ :ವಾಸನೆ
ಘಾಣಿರ್ಡೊ :ವಾಸನೆಯುಳ್ಳವನು , ಘಾಣಿರ್ಡಿ : ವಾಸನೆಯುಳ್ಳವಳು
ಘಾಸ್ಸವೆಚ :ತೊಳೆಯುವುದು
ಘೇ : ತೆಗೆದುಕೊ , ಎತ್ತಿಕೊ
ಘೋರವೆಚ :ಗೊರಕೆ ಹೊಡೆಯುವುದು

ಪ, ಫ ,ಬ ,ಭ, ಮ

ಪಳಾ :ನೋಡು
ಪಳಾವ್ವೆಚ :ನೋಡುವುದು
ಪತ್ರಿ : ದೇವರ ಪೂಜೆಗೆ ಬೇಕಾದ ಹೂವು,ಎಲೆಗಳು ಇತ್ಯಾದಿ.
ಪರ್ಮೊಳು :ಸುವಾಸನೆ
ಪಣೊಸು : ಹಲಸಿನ ಹಣ್ಣು
ಪಡ್ಸಲ
ಪಡ :ಬೀಳು
ಪರ್ವಾ :ನಾಡಿದ್ದು
ಪಕ್ಷಾ : ಕ್ಕಿಂತ ( ತೇ ಪಕ್ಷಾ : ಅದಕ್ಕಿಂತ )
ಪಸುಂಗುರಿ : ತಂಬುಳಿ



ಪಾನ :ಎಲೆ
ಪಾಟು :ಕಾಲುವೆ
ಪಾತ್ತಳ : ತೆಳು
ಪಾವೊಸು :ಮಳೆ
ಪಾಣಿ : ನೀರು
ಪಾಣಿ ಜಾವೈಶಿ :ಅಳಿಯನ ಸಹೋದರ
ಪಾಳಣೊ :ತೊಟ್ಟಿಲು
ಪಾಪ್ಪೊಡು :ಹಪ್ಪಳ
ಪಾಹಂತಾ :ಬೆಳಗ್ಗೆ
ಪಾಹಂತ್ಪಟಿ : ನಸುಕು
ಪಾಂಗುರ್ಣ :ಹೊದಿಕೆ
ಪಾಠಿ :ಬೆನ್ನು
ಪಾಯಿ :ಕಾಲು (ನಾಮಪದ ), ಕಳಿಸು ( ಕ್ರಿಯಾಪದ)
ಪಾವು : ಪಾವು ( ಒಂದು ಅಳತೆಯ ಸಾಧನ )
ಪಾದು :ಹೂಸು (ಶಬ್ದ ಸಹಿತ)
ಪಾರಾಯಿ : ಸಬ್ಬಲು , ಭೂಮಿ ಅಗೆಯಲು ಬಳಸುವ ಉದ್ದನೆಯ ಉಪಕರಣ
ಪಾವುಠಣ :ಮೆಟ್ಟಲು
ಪಾಖ್ಖಿರು :ಹಕ್ಕಿ
ಪಾಯಿಂಗೊತ್ತಾ:ಕಾಲಿನ ಹತ್ತಿರ
ಪಾಯಿಖಾನೊ : ಸಂಡಾಸು
ಪಾಣ್ಯಾರಿ:ಸಂಡಾಸಿಗೆ ಹೋಗುವುದು
ಪಾಹೊಣಿ :ನೆಂಟರು
ಪಾಠು :ಪಾಠ
ಪಾಳುಕ :ಬಸವನ ಹುಳ
ಪಾರಾಯಣ :ದೇವರ ಪಾರಾಯಣ,ಪೂಜೆ







ಪೋಳ್ಯೊ : ಹೋಳಿಗೆ
ಪುನ್ನವ :ಹುಣ್ಣಿಮೆ
ಪೇಢಿ :ಜಗಲಿ
ಪೇರ :ಸೀಬೇ ಹಣ್ಣು
ಪೆಂಖಟ :ಸೊಂಟ
ಪೆಲ್ಲೊ :ಲೋಟ



ಪುಡ :ಮುಂದೆ
ಪುಯಿಶಿರೆ :ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ತೊಳೆಯಲ್ಲಿ ಉಂಟಾಗುವ ಹುಳ
ಪುಢ್ಲೆ ದಾರ :ಮುಂಬಾಗಿಲು
ಪುರುಷು : ಪುರುಷ
ಪುರ್ಸತಿ :ಪುರುಸೊತ್ತು

ಪೊಖ್ಖೊರು :ತೂತು

ಪೊಪ್ಫಳ :ಅಡಿಕೆ

ಪೀ :ಕುಡಿ


ಪೈಸೆ :ದುಡ್ಡು


ಪೋಟ: ಹೊಟ್ಟೆ
ಪೋರು :ಸಣ್ಣ ಹುಡುಗ
ಪೋರಿ :ಸಣ್ಣ ಹುಡುಗಿ
ಪೋಹು :ಅವಲಕ್ಕಿ
ಪೋಳಿ :ಹೋಳಿಗೆ
ಪಿವುಣೊಸು :ಹೆಬ್ಬಲಸು


ಫಟಿ :ಸುಳ್ಳು
ಫಳಿ :ಮುಚ್ಚುವುದ್, ಮರದ ಹಲಗೆ
ಫಳ :ಹಣ್ಣು
ಫರ್ಕಾ :ಹರಕೆ
ಫಳಾರು :ಉಪಹಾರ

ಫಾಳುಕೊ :ಬಾಳೆ ಎಲೆ ( ಸಣ್ಣದಾಗಿ ಕತ್ತರಿಸಿದ್ದು )

ಫಾಟ್ಟವೆಚ : ಹರಿಯುವುದು
ಫೂಲ :ಹೂವು
ಫುಟ್ಟವೆಚ :ಒಡೆಯುವುದು
ಫುಸ್ಕಿ: ಹೂಸು(ಶಬ್ದ ರಹಿತ)
ಫುಲ್ಲದಾಡಿ :ಹೂ ಗಿಡ
ಫುಲ್ಲವೆಚ :ಅರಳುವುದು
ಫುರ್ನ್ ಗುಲಿ : ಅರಳು ( ಲಾಯ್ಯೊ )
ಫೂಂಕ :ಊದು
ಫೇಣು: ನೊರೆ
ಫೋಡಿ :ಅಡಕೆಯ ಚೂರು,ಬಜ್ಜಿ


ಬಾಗ್ಗಡೊ : ಜಿರಳೆ
ಬಾಳ :ಮಗು
ಬಾಳಗಿ : ಜೋಪಾನ ಮಾಡು
ಬೇಸ :ಕುಳಿತುಕೊ
ಬೆಟ್ಟೊ :ಅಡಿಕೆ ( ಸುಲಿದದ್ದು)
ಬಾಹೆರ್ಜಾಣ :ಭೇದಿ
ಬುರ್ ಮ್ ಬ : ಮೊಡವೆ
ಬೊಮ್ಮಾರಿ : ಬೊಬ್ಬೆ ಹಾಕು
ಬೊಯ್ಯೊ : ಹೋಳು
ಬೋಬ :ಬೊಬ್ಬೆ
ಬೋಂಕಿ : ಹೊದಿಕೆಯನ್ನು ಪೂರ್ತಿಯಾಗಿ ಹೊದ್ದಿರುವುದು
ಬೊಂಬಿ : ಹೊಕ್ಕಳು

ಭಾಂಡಣ : ಜಗಳ
ಭುಬ್ಭಟ : ಅಸ್ತವ್ಯ ಸ್ತ
ಭೂಯಿ :ಭೂಮಿ
ಭೋವ :ತಿರುಗು
ಭೂಖ :ಹಸಿವು
ಭಾಂತಾರೊ: ಮುದುಕ
ಭಾಂತಾರಿ :ಮುದುಕಿ
ಬೊಡ್ಯೊ : ಮಗ, ಹುಡುಗ
ಬಯ್ಯಾಕೊ : ಹೆಂಡತಿ
ಭರಾನಾ : ವೇಗವಾಗಿ
ಭೂತ :ಭೂತ
ಬಾಂಧ :ಕಟ್ಟು
ಭಾತು :ಅನ್ನ
ಭೀವಯೊ:ಹುಬ್ಬು


ಮನುಶ್ಯು :ಮನುಷ್ಯ
ಮಸ್ತ :ಬಹಳ
ಮಗ :ಮತ್ತೆ
ಮಘ :ಸೌತೆ (ಮಂಗಳೂರು ಸೌತೆ )
ಮ್ಹಣ : ಹೇಳು
ಮಣು : ಮಣ ( ಒಂದು ರೀತಿಯ ಅಳತೆ)

ಮಾಂಕೊಡು :ಮಂಗ
ಮಾಂಟ :ಮಾಟ
ಮಾಗ್ಗಿಲ್ದ್ರಾರ :ಹಿಂಬಾಗಿಲು
ಮಾರವೆಚ :ಹೊಡೆಯುವುದು
ಮಾರು :ಪೆಟ್ಟು
ಮಾಲಾ :ನನಗೆ
ಮಾಳ :ಮಾಲೆ,ಒಂದು ಊರಿನ ಹೆಸರು
ಮಾಳು :ಅಟ್ಟ
ಮಾಜ್ಜೆರ :ಬೆಕ್ಕು
ಮಾಥ್ಥ :ಹೆಂಗಸರ ತಲೆ
ಮಾಗ್ಗಿಣ :ಹಿಂದೆ
ಮಾನ್ಚ್ಹಿ: ವಸ್ತುಗಳನ್ನು ಒಣಗಿಸಲು ಮಾಡಿದ ಅಟ್ಟಳಿಗೆ
ಮಾನ್ಸೊ : ಮೀನು
ಮಾಗ್ಗವೆಚ: ಬೇಡುವುದು
ಮಾತ್ತವೆಚ : ಮದವೇರುವುದು

ಮಿರ್ಸಾಂಗ: ಮೆಣಸು
ಮೀಠ :ಉಪ್ಪು
ಮೀರ್ಯ: ಕರಿಮೆಣಸು
ಮೊಗ್ಗರ :ಮಲ್ಲಿಗೆ
ಮೇ :ನಾನು


ಮೋಳು : ಕಿವಿ ಕಸ

ಮುರ್ಕುಟಿ :ನುಸಿ
ಮುತ್ತು :ಮೂತ್ರ
ಮುಗ್ಗಾನ್ಚಿದಾಳಿ :ಹೆಸರು ಬೇಳೆ
ಮುನ್ಗಿ : ಇರುವೆ

ಅ ಆ ಇ ಈ ಉ ಊ

ಆಜಿ : ಇವತ್ತು
ಅಜುನೆಕ : ಇನ್ನೊಂದು
ಅಜುನೆದಾ :ಇನ್ನೊಮ್ಮೆ
ಅವ್ವಲ :ಒಳ್ಳೆಯ
ಅವ್ವಲಿ :ಒಳ್ಳೆಯ ( ಸ್ತ್ರೀ)
ಅವೊ:ಆಜವಾನ
ಅಸ್ಕಡ :ಕಷ್ಟ
ಅಷ್ಟದಳ : ಒಂದು ಬಗೆಯ ರಂಗೋಲಿ ವಿನ್ಯಾಸ
ಅಜ್ಕ :ಇಡೀ
ಅನಿಕ : ಮತ್ತು
ಅತ್ರಸ : ಒಂದು ಬಗೆಯ ತಿಂಡಿ
ಅಕ್ಷತ : ಅಕ್ಷತೆ ಕಾಳು
ಅಧಿಕ :ಹೆಚ್ಚು
ಅಧಿಕಾವ್ವೆಚ :ಹೆಚ್ಚಿಸುವುದು



ಆಂಬ :ಹುಳಿ
ಆಂಬಡ್ ಶಾಕ : ಮಜ್ಜಿಗೆ ಹುಳಿ
ಆಂಬೊ :ಮಾವು
ಆಂಬುಲಿ:ಮಾವಿನ ಮಿಡಿ
ಆಮ್ಹಿ :ನಾವು
ಆಜ್ಜೊಳ : ಅಜ್ಜಿ ಮನೆ
ಆಜಿ :ಇವತ್ತು
ಆಳೊಸು :ಸೋಮಾರಿತನ
ಆದ್ದಿ : ಮೊದಲು
ಆದ್ದಿಪಶ್ಟಿ : ಮುಂಚಿನಿಂದ
ಆಘ್ಹೊಟಿ :ಮಳೆಗಾಲ
ಆಮ್ಧಾ : ನಮಗೆ
ಆಡ್ಡವತ :ಹಲಸಿನ ಹಣ್ಣಿನ ಕಡುಬು
ಆಡ್ಡುಖಳ:ಎಡವು
ಆಮ್ಚ : ನಮ್ಮ
ಆಘ್ಹಿ : ಎಲ್ಲರೂ
ಆ..ಘಿ :ಝಳ

ಆಂಬಟ : ಹುಳಿ
ಆಂಕುರಿ:ಚಿಗುರು(ಏ), ಆಂಕುರ್ಯೊ (ಬ)
ಆಠ್ಠಿಳ :ಹಲಸಿನ ಹಣ್ಣಿನ ಬೀಜ
ಆಠ್ಠೊವು :ನೆನಪು
ಆಂಝಳವೆಚ : ಉರಿಯುವುದು
ಆಂದುಳವೆಚ:ತೂಗುವುದು
ಆಂಚ*ಳ :ಕೆಚ್ಚಲು
ಆಯ್ಯೆ :ಅಮ್ಮ
ಆಣ್ಣಾ : ಅಣ್ಣ
ಆ..ಕ : ಗಂಡನ ಸಹೋದರಿ
ಆಕ್ಕಾ :ಅಕ್ಕ
ಆಪ್ಪದಾ :ಕಷ್ಟ
ಆಧ್ಯೆಲೊ:ಕೇರೆ ಹಾವು
ಆರ್ಡವೆಚ*:ಅರಚುವುದು
ಆಸ್ಸೊರು :ಮಳೆ ಇಲ್ಲದಿರುವಿಕೆ.ಉದಾ:ಎಶ್ಯಾ ಎದಾ ಆಸ್ಸೊರು ಆಯಿಲೊ..ಕಾಲ್ಲಿಪಶ್ಟಿ ಮಸ್ತ ಪಾವೊಸು ಸಲೊ.
ಆಗ್ ಹೊತ್ಲಿ :ಕುಡಿ ಬಾಳೆ ಎಲೆ.
ಆಲ್ಲ" :ಶುಂಠಿ
ಆಯ್ಕವೆಚ* :ಕೇಳುವುದು
ಆಂಗವಸ್ತ್ರ: ಟವೆಲ್
ಆಸ :ಆಸೆ



ಇಂಡಿರಿ : ತೆಂಗಿನ ಕಾಯಿಯ ಒಳಗೆ ಬಂದಿರುವ ಮೊಳಕೆ
ಇಡೆಶ್ಶೊಣಿ :ಇಕ್ಕಟ್ಟು
ಇತ್ಲ :ಇಶ್ಟು
ಇತ್ಲಚ್ಚಿ :ಇಷ್ಟೇ
ಇತ್ಲೆಕಾಂಧಾ : ಇದಾಗುವಷ್ಟರಲ್ಲಿ
ಇತ್ಪಸ : ಇಷ್ಟರಮಟ್ಟಿಗೆ
ಇಂಧೊ : ಒಲೆ
ಇಂದುಸೂಣ :ಕಟ್ಟಿಗೆ
ಇಕ್ಕುಳು :ಇಕ್ಕಳ


ಈಶ್ವೊರು : ಶಿವ

ಉಖ್ಖಿಳಾವ್ವೆಚ :ಎಬ್ಬಿಸುವುದು (ದೋಸೆ ಎಬ್ಬಿಸುವುದು)
ಉಘ್ಘಡವೆಚ: ತೆರೆಯುವುದು
ಉಜ್ಜಾಡ್ತಾ :ಬೆಳಗ್ಗೆ
ಉಜ್ಜೊಡು :ಬೆಳಕು
ಉಠ್ಠವೆಚ :ಏಳುವುದು
ಉಠ್ಠವ್ವೆಚ :ಎಬ್ಬಿಸುವುದು (ನಿದ್ದೆಯಿಂದ ಎಬ್ಬಿಸುವುದು,ಕುಳಿತಲ್ಲಿಂದ ಎಬ್ಬಿಸುವುದು)
ಉದ್ಯಾಪನ : ಮುಗಿಸುವುದು ( ವ್ರತ ಇತ್ಯಾದಿ)
ಉದ್ಮತ್ತು : ಮದವೇರಿದ
ಉಪ್ರಾಂತ :ನಂತರ
ಉಘ್ ಡೊ ಭಾತು :ಕುಚುಲಕ್ಕಿ ಅನ್ನ
ಉಚ್ಚಿಟ್ಸೇಣ :ಊಟದ ನಂತರ ಸೆಗಣಿಯಿಂದ ಉಂಡ ಜಾಗವನ್ನು ಶುದ್ಧೀಕರಿಸುವುದು
ಉಚ್ಹ್ಚಿಟಾವಣ: ಅನ್ನ ಪ್ರಾಶನ
ಉಚ್ಚಿಟ: ಎಂಜಲಾದ
ಉನ್ಹನ :ಬಿಸಿ
ಉಸ್ಪವೆಚ : ದೊಡ್ಡ ಪಾತ್ರೆಯಿಂದ ಸಣ್ಣ ಪಾತ್ರೆಗೆ ವರ್ಗಾಯಿಸುವುದು.(ಬಾಣಾಂಠಿ ಪಾಣಿ ಉಸ್ಪವೆಚ, ಭಾತು ಉಸ್ಪವೆಚೊ )
ಉಂದಿರು : ಇಲಿ
ಉಪ್ಪಿಡ : ಬೋರಲು
ಉತ್ತ್ತಾಣ :ಅಂಗಾತ
ಉಪ್ರಾಠ :ತಿರುಗು ಮುರುಗು
ಉಜ್ವ*:ಬಲ
ಉಧರಿ :ವಾಂತಿ
ಉಧ್ರವೆಚ*:ವಾಂತಿ ಮಾಡುವುದು
ಉಡಿದ :ಉದ್ದು


ಉಂಬೊರು:ಹಲಸಿನ ಹಣ್ಣಿನಿಂದ ಮಾಡುವ ಒಂದು ಬಗೆಯ ತಿಂಡಿ,ಹೊಸ್ತಿಲು, ಉಂಬರ (ಬ)
ಉಪ್ಪಾಸು:ಉಪವಾಸ
ಊಬ :ಸೆಖೆ
ಊನ್ಚ :ಎತ್ತರ
ಊನ್ಸು :ಕಬ್ಬು

ಊದ್ಯಾ :ನಾಳೆ
ಉದ್ಯಾನೊಪರ್ವಾ :ನಾಡಿದ್ದು

ಚಿತ್ಪಾವನಿ ಭಾಷೆಯ ಪದಗಳನ್ನು ಒಂದೆಡೆ ಕೂಡಿಡುವ ಪ್ರಯತ್ನ( updated)

Chitpavani language Dictionary

ಎಲ್ಲರಿಗೂ ನಮಸ್ಕಾರ.
ನಿಮಗೆ ತಿಳಿದಿರುವ ಪದಗಳನ್ನು ಅರ್ಥ ಸಹಿತ ತಿಳಿಸಿ..ನಾನು ಈ ಬ್ಲೊಗ್ ನಲ್ಲಿ ಒಟ್ಟು ಮಾಡಿ ಪ್ರಕಟಿಸುತ್ತೇನೆ.
ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.
ತಪ್ಪುಗಳಿದ್ದರೆ ದಯವಿಟ್ಟು ತಿದ್ದಿ.
ಇತಿ ವಂದನೆಗಳೊಂದಿಗೆ,
ಅರ್ಚನಾ,
ಹೊಸ್ಮಠ
ಎಶ್ಯಾ ಸಯಿವೆಚಿ :ಬೆಂಗಳೂರಾಂತು
ಮಾಜ್ಜ ಇ ಮೈಲ್ :hiarchu21@gmail.com