Monday, March 12, 2007

ಎ,ಏ,ಐ, ಒ,ಓ

ಎಠಾ : ಇಲ್ಲಿ
ಏದಾ : ಒಮ್ಮೆ
ಎವ್ಠಿ : ಇತ್ತೀಚೆಗೆ
ಎಡ್ವೋಳಾ : ಇಷ್ಟು ಹೊತ್ತಿಗೆ
ಏಕ : ಒಂದು
ಏಳಾ:ಏಲಕ್ಕಿ


ಐರಾಮಾನ್ಹಾಣ : ?

ಒಕ್ಖತ :ಮದ್ದು
ಒವೆಳಿ :ರಜಸ್ವಲೆ
ಒವೆಳ-ಸೊವೆಳ : ಮೈಲಿಗೆ-ಮಡಿ
ಒಲ್ಲ* : ಒದ್ದೆ
ಒಲ್ಲಿ ಮಿರ್ಸಾಂಗ :ಹಸಿ ಮೆಣಸು
ಒಳತಿ :ಗೋಡೆ
ಒಂಗಳ :ಕೆಟ್ಟ
ಒಶ್ಶಿಸ":ತಲೆದಿಂಬು
ಒಡ್ಡವೆಚ* :ಎಳೆಯುವುದು
ಓಢಿ :ಸೆಳೆತ

ಹ( updated )

ಹರ್ವಾಣ : ಹರಿವಾಣ
ಹಳು :ನಿಧಾನ
ಹದಾ : ಹದ
ಹಗು :ಮಲ
ಹಳದಿ : ಅರಸಿನ
ಹುಳ್ವ : ಅಲುಗಾಡು
ಹಯಿ :ಹೌದು
ಹರ್ವ:ಕಾಯಿ (ಹಣ್ಣಾಗದ್ದು)
ಹತ್ತಿ :ಆನೆ
ಹಂಚು :ಹಂಚು
ಹಸವೆಚ :ನಗುವುದು
ಹಶಾಳ*:ಮಾವಿನ ರಸಾಯನ
ಹರ್ವಾಳ : ಹಗುರ
ಹಳ್ದುಗ್ಡ :ಅರಸಿನದ ಕೊಂಬು
ಹರಿ :ನಮಸ್ಕಾರ
ಹರ್ತಾಳಿಕಾ :ಚೌತಿಯ ಸಮಯದಲ್ಲ್ಲಿ ಸ್ತ್ರೀಯರು ಮಾಡುವ ವ್ರತ
ಹಾಲ್ಲಡಿ: ಕಂಕುಳಲ್ಲಿ ಎತ್ತಿಕೊಳ್ಳುವುದು ( ಬಾಳಾಲ ಹಾಲ್ಲಡಿ ಘೆವೆಚ :ಮಗುವನ್ನು ಕಂಕುಳಲ್ಲಿ ಎತ್ತಿಕೊಳ್ಳುವುದು.
ಹೈರ :ಸರಿ

ಹಿಂಡೊ : ಕಡಿಮೆ ಅವಧಿಯ ಭೇಟಿ
ಹಿರಿಡಿ:ಒಸಡು
ಹೀವ :ಚಳಿ
ಹೀವಾಳಿ :ಚಳಿಗಾಲ


ಹೂಂಗ :ಮೂಸುವುದು
ಹೋಳವೆಚ :ಒಗೆಯುವುದು
ಹಾಡವೆಚ :ತರುವುದು
ಹಾಪ್ಪಟವೆಚ :ತಾಗುವುದು

ತ,ಥ,ದ ,ಧ ,ನ

ತಸತೆ :ಹಾಗಾದರೆ
ತಸಲೆಲಾ:ಅಂಥದ್ದಕ್ಕೆ
ತಸ :ಹಾಗೆ
ತಮಗ :ಹಾಗಾದರೆ
ತಸ್ತೆ :ಹಾಗಾದರೆ
ತಿತ್ಲೆಕಾಂಧಾ : ಅಷ್ಟು ಹೊತ್ತಿಗೆ
ತೆಲ್ಕಟ : ಎಣ್ಣೆ ಮಯ
ತಳ್ವಣ :ಎಣ್ಣೆ ತಿಂಡಿ
ತಿಖ್ಖಟ :ಖಾರದ್ದು




ತಾಂದುಳ :ಅಕ್ಕಿ
ತೀರ್ಥ :ತೀರ್ಥ
ತೀಳು :ಎಳ್ಳು
ತಾಳಿ :ತಾಳಿ
ತೋಂಡ : ಮುಖ
ತೂ : ನೀನು
ತುಮ್ಹಿ :ನೀವು
ತೂಲಾ:ನಿನಗೆ
ತುಜ್ಹ :ನಿನ್ನ
ತೇಲಾ:ಅವನಿಗೆ
ತ್ಯಾಲಾ:ಅವಳಿಗೆ
ತೆಗ್ಡಾ : ಆ ಕಡೆ
ತೆಢ್ಲಾ :ಆಗ
ತೇವರ್ಠಿ :ಅವನಿಂದಾಗಿ,ಅದರಿಂದಾಗಿ, ತ್ಯಾವರ್ಠಿ :ಅವಳಿಂದಾಗಿ
ತೇಲಾಚ್ಚಿ :ಅವನಿಗೇ
ತ್ಯಾಹಾ : ಅಲ್ಲಿ
ತೂಪ : ತುಪ್ಪ
ತೇಲ : ಎಣ್ಣೆ
ತಾಂಬುಲ : ತಂಬಿಗೆ
ತಾಂಬ್ಯೊ : ತಂಬಿಗೆ
ತಾಂಬಿಡೊ :ಕೆಂಪು

ಥುಂಕಿ :ಎಂಜಲು
ಥುಂಕವೆಚ :ಉಗುಳುವುದು
ಥೋಡ :ಸ್ವಲ್ಪ
ಥಂಡ :ತಣ್ಣನೆಯ
ಥಾಂಬವೆಚ :ನಿಲ್ಲುವುದು

ದಹಿ :ಮೊಸರು

ದಾರ :ಬಾಗಿಲು
ದೋರಿ :ಹಗ್ಗ
ದೋನಿ :ಎರಡು
ದೂಧ :ಹಾಲು
ದುದ್ಧೌಣಿ :ಹಾಲು ನೀರು
ದೇವು :ದೇವರು
ದಾಳಿ :ಬೇಳೆ
ದಾಂತು : ಹಲ್ಲು, ದಾಂತ (ಬ)
ದುಧ್ಯೊ ;ಚೀನೀಕಾಯಿ
ದುಪ್ಪಾರಿ :ಮಧ್ಯಾಹ್ನ
ದೇವು :ದೇವರು
ದೇವೆಚ :ಕೊಡುವುದು
ದುಪ್ಪಟ : ಎರಡು ಪಟ್ಟು
ದೀವೊ:ದೀಪ
ದಾಂಡೊ :ಕೋಲು


ಧಡಿ :ಸೀರೆ
ಧಾಕ್ಕುಟ : ಮಗು , ಧಾಕ್ಕುಟಿ :ಮಕ್ಕಳು
ಧುಂಕೊಟು :ಹೊಗೆ
ಧೂಳಿ :ಧೂಳು
ಧಾವ :ಓಡು
ಧಾರ ಕಾಡ್ಡವೆಚಿ: ಹಾಲು ಕರೆಯುವುದು
ಧುವಣ:ಅಕ್ಕಿ ತೊಳೆದ ನೀರು
ಧುವಣ ಕಾಡ್ಢವೆಚ :ಅಕ್ಕಿಯನ್ನು ನೀರಿನಿಂದ ತೊಳೆಯುವುದು
ಧೋವ :ತೊಳೆ
ಧೋವೊ :ಬಿಳಿ




ನವರೊ :ಗಂಡ
ನವರಿ :ಹೆಂಡತಿ
ನವ :ಹೊಸ, ಹೊಸ ಅಕ್ಕಿ ಊಟ
ನಾಂಖುಟ : ಉಗುರು
ನಾರ್ಯೊಳು :ತೆಂಗಿನ ಕಾಯಿ
ನಾವ :ಹೆಸರು
ನಾಜೂಕ :ನಾಜೂಕು
ನಾಗ್ಗುಡ :ಬೆತ್ತಲೆ
ನಾಚ್ಚ ವೆಚ : ನರ್ತಿಸುವುದು
ನಿರ್ಮಾಲ್ಯ :ದೇವರಿಗೆ ಅರ್ಪಿಸಿದ ಹೂವು, ಪತ್ರೆ ಇತ್ಯಾದಿಗಳು ಅರ್ಪಿಸಿದ ಮರುದಿನಕ್ಕೆ ಈ ಹೆಸರು ಪಡೆಯುತ್ತವೆ.
ನೀದ :ನಿದ್ದೆ
ನೀವ :ತಣಿ ( ಕ್ರಿಯಾಪದ), ಮಾಡು (roof ) ನಾಮಪದ
ನರ್ವಾಂಟೆಳೊ : ಚೊರೆ (dont know proper kannada word .pls suggest)
ನುನ್ನು :ಹಾಲು (ಬಾಲ ಭಾಷೆ)
ನಿನ್ನಿ : ನಿದ್ಧೆ(ಬಾಲ ಭಾಷೆ)
ನಿಶಿಣಿ :ಏಣಿ
ನಿತ್ಯ :ನಿತ್ಯ
ನೋಹೆ : ಅಲ್ಲ
ನೊಕಾ :ಅಲ್ಲವೆ?
ನೇವೆಚ :ಕೊಂಡೊಯ್ಯುವುದು
ನೀಲಾಂಜನ :ಸಣ್ಣ ದೀಪ
ನಿಜ್ಜಪವೆತ್ಸ : ಅಚ್ಚುಕಟ್ಟು ಮಾಡು (dont know proper kannada word .pls suggest)
ನಿದಳ :ಹಣೆ
ನಿತ್ತಳ :ನಯವಾದ
ನಾಂಕ :ಮೂಗು

ಸೆ : ( ಇದರ ಉಚ್ಚಾರ ಕೊಂಚ ಭಿನ್ನ ) ತ್ಸೆ ಎನ್ನುವುದು ಸರಿ ಎಂದನಿಸುತ್ತದೆ. : ಇದೆ



ಸಸೆ :ಇರುತ್ತದೆ
ಸವಾಶಿಣಿ :ಮುತ್ತೈದೆ
ಸಲ :ಇತ್ತು
ಸೂಣ :ನಾಯಿ
ತ್ಸೇಪ :ಬಾಲ
ಸಂಧ್ಯಾ :ಸಂಧ್ಯಾವಂದನೆ
ತ್ಸಾಹಿ : ನೆರಳು
ಸಾಂಝಾ :ಸಂಜೆ
ಸೂಯಿ :ಸೂಜಿ
ಸತಾ :ಇದ್ದಾಗ
ಸತ್ಯ :ಸತ್ಯ
ಸಹಾ : ಕೆನೆ,ಕೂಡ
ಸುರೇಖ : ಸುಂದರ
ಸಾಸ್ಸುರ : ಗಂಡನ ಮನೆ
ಸಾಸ್ರೆವಾಸು :ಕಿರುಕುಳ
ಸಸೂತ್ರ : ಸಸೂತ್ರ
ಸಮೂರಿ :ಮುಂದೆ
ಸ..ರಿ:ಸರಿಗೆ
ಸಾರಿಖ : ರೂಪ
ಸಾರವ್ವೆಚ:ಸಾರಿಸುವುದು
ಸಾಂದಣ :ಕಡುಬು
ಸಾಣ:ತೀಡಲು ಬಳಸುವ ಕಲ್ಲು ( ಉದಾ:ಗಂಧಾಚ ಸಾಣ :ಗಂಧ ಅರೆಯುವ ಕಲ್ಲು

ಸಾರ :ಸಾರು
ಸಾರಿಖ'' :ರೂಪ
ಸಾರ್ಖೊತು :ಬೂದಿ

ಸುನ್ನಶಿ :ಸೊಸೆ
ಸುಜ್ಜ*ವೆಚ*'' :ಬಾತುಕೊಳ್ಳುವುದು
ಸುಹೇರು :ಕುಟುಂಬದಲ್ಲಿ ಯಾರಾದರೂ ಹುಟ್ಟಿದರೆ ೧೦ ದಿನಗಳ ಕಾಲ ಪೂಜೆ,ಪುನಸ್ಕಾರಗಳಿರುವುದಿಲ್ಲ..ಅದನ್ನು ಸುಹೇರು ಎನ್ನುತ್ತಾರೆ
ಸೂತಕ :ಕುಟುಂಬದಲ್ಲಿ ಯಾರಾದರೂ ಸತ್ತರೆ ೧೦ ದಿನಗಳ ಕಾಲ ಪೂಜೆ,ಪುನಸ್ಕಾರಗಳಿರುವುದಿಲ್ಲ..ಅದನ್ನು ಸೂತಕ ಎನ್ನುತ್ತಾರೆ
ಸೂಜಿ :ಬಾವು


ಸಮಾನ: ಸರಿ
ಸೊಕ್ಕಿ ಕರವೆಚ :ನೆಲ ಒರಸುವುದು
ಸಾಪು: ಸರ್ಪ
ಸಾಂಭಾರ : ಒಂದು ರೀತಿಯ ಸೊಪ್ಪು
ಸಾಂಭಾರೊಟ್ಯ : ಸಾಂಭಾರ ಪದಾರ್ಥ ಗಳನ್ನು ಇಡುವ ಪೆಟ್ಟಿಗೆ
ಸಾಂಥ :ಸಂತೆ
ಸಾಂದಿಪಣ :ಕಟ್ಟಿಗೆ
ಸಾಗಕ್ಕಿ :ಸಾಗಕ್ಕಿ

ಸಾಖ್ಖರ :ಸಕ್ಕರೆ
ಸುಖ್ಖಿ :ಪಲ್ಯ
ಸುಂಠೊ:ಚಿವುಟಿವಿಕೆ, ಸುಂಠೊ ಕಾಡ್ಡವೆಚೊ: ಚಿವುಟುವುದು


ಸೂರಿ :ಚೂರಿ
ಸುಖ್ಖ'' :ಒಣ
ಸುಖ್ಖವ್ವೆಚ :ಒಣಗಿಸುವುದು
ಸುರೈ :ಬೆಳ್ತಿಗೆ
ಸೂತ :ನೂಲು

ಸೇವ್ಯೊ :ಸೇಮಿಗೆ
ಸೇಸ ಲಾವ್ವೆಚ* '':ಗಂಧ ಮತ್ತು ಅಕ್ಷತೆಯನ್ನು ಸ್ತ್ರೀಯರ ಹಣೆ ಮತ್ತು ಮೂಗಿನ ಮಧ್ಯಭಾಗಕ್ಕೆ ಹಚ್ಚುವ ಕ್ರಿಯೆ
ಸೇಸ-ಕುಂಕು :ಗಂಧ ಮತ್ತು ಅಕ್ಷತೆಯನ್ನು ಸ್ತ್ರೀಯರ ಹಣೆ ಮತ್ತು ಮೂಗಿನ ಮಧ್ಯಭಾಗಕ್ಕೆ ,ಮತ್ತು ಕುಂಕುಮವನ್ನು ಹಣೆಗೆ ಹಚ್ಚುವುದು
ಸೂರ್ಯು :ಸೂರ್ಯ


ಸಪಾದ :ಸತ್ಯನಾರಾಯಣ ಪ್ರಸಾದ
ಸಳಾಥಿ :ಹಿಡಿಸೂಡಿ
ಸಾಟ್ಠಿವ :೬೦ ನೇ ಜನ್ಮದಿನಾಚರಣೆ
ಸಾತ್ತರ್ಯವ :೭೦ನೇ ಜನ್ಮ ದಿನಾಚರಣೆ
ಸೋಂಢ :ಸೊಂಡಿಲು
ಸಾಟ್ಟಿ : ಕಡುಬು ಮಾಡುವ ಪಾತ್ರೆ
ತ್ಸಾತ್ತಿ :ಕೊಡೆ
ಸಾಠ್ಠಿ :ಕ್ಕೋಸ್ಕರ (ಪ್ರಯೋಗ : ತೇ ಸಾಠ್ಠಿ : ಅದಕ್ಕೋಸ್ಕರ )
ಸತಾ :ಇರುವಾಗ
ಸೋಡಿ :ಬಿಡು, ಸೋಡವೆಚ :ಬಿಡುವುದು
ಸೋಡ್ಲ : ಹಣತೆ, ಬಿಟ್ಟೆ
ಸೋಂಢ :ಸೊಂಡಿಲು
ಸ್ವ್ಯಯ : ಪ್ರಜ್ ನೆ

ಟ ,ಠ ,ಡ ಢ

ಟಿವ್ಳ:ದೀಪಾವಳಿ ಸಮಯದಲ್ಲಿ ಉರಿಸುವ ಹಣತೆ

ಡುಕ್ಕೊರು :ಹಂದಿ
ಡಾವ :ಎಡ
ಡಾವುಕುರೊ :ಎಡಚರ
ಢಾಂಕಿ :ಮುಚ್ಚು
ಢಾಂಕಣ :ಮುಚ್ಚಳ
ಢೆಕ್ಕಿರ :ತೇಗು
ಡೊಗ್ಗೊರು : ಗುಡ್ಡ
ಡೊಯಿ :ಗಂಡಸರ ತಲೆ
ಡೊಹೆಳೆ :ಬಸುರಿಯಾದಾಗ ಆಗುವ ಅನಾರೊಗ್ಯ
ಡೊಂಗಳೊ : ದೊಡ್ಡ ಇರುವೆ
ಡೇವ್ವೆಚ :ಇಳಿಯುವುದು
ಢೊಂಪರ :ಮಂಡಿ ಚಿಪ್ಪು
ಢೊಮ್ಮಳ : ದಪ್ಪ (ಢೊಮ್ಮೊಳು(ಪುಲ್ಲಿಂಗ), ಢೊಮ್ಮಳಿ(ಸ್ತ್ರೀ)

ಕ,ಖ,ಗ,ಘ

ಕಳ್ಸೂತ :ಹತ್ತಿಯ ನೂಲು ( ದೇವರ ಪೂಜೆಗೆ ಬಳಸಲಾಗುತ್ತದೆ )
ಕಡ್ಗುಲ :ಬಳೆ , ಕಡ್ಗುಲಿ :ಬಳೆಗಳು
ಕರಿ:ಮಾಡು
ಕರವೆಚ :ಮಾಡುವುದು
ಕರಾನ್ನೊ :ಬ್ರಾಹ್ಮೀ ಎಲೆ,ಒಂದೆಲಗ
ಕರ್ದಟೊ :ಉಡಿದಾರ
ಕರ್ಬೇವು :ಬೇವು
ಕಸ :ಹೇಗೆ
ಕ..ಯಿ : ಯಾವಾಗ
ಕ..ಣೆ :ರಂಗೋಲಿ
ಕ..ಣಿ :ನೀರು ಹರಿಯುವ ಜಾಗ, ಸಾಂಬಾರಿಗೆ ರುಬ್ಬಿದ ಮಸಾಲೆ



ಕೋಳಿ :ಜೇಡ
ಕುಛ್ಛಿ :ಮಗ್ಗುಲು
ಕುಳಿಥ :ಹುರುಳಿ
ಕಾಣಿಕ :ಕಾಣಿಕೆ
ಕಾಥ್ಠೊಡ್ಲಿ :ದೊಡ್ಡ ಪಾತ್ರೆ.
ಕಾಹೆಲಿ :ಕಾವಲಿ
ಕೂವೊ: ಅರಾರೂಟ್
ಕೆಪ್ಪೊ:ಕಿವುಡ
ಕುರ್ಡೊ:ಕುರುಡ



ಕಾಕ್ಕವಿ : ಹಲಸಿನ ಹಣ್ಣಿನ ಜಾಮ್
ಕಾಜ್ಜಾಂಬೊ :ಗೇರು ಹಣ್ಣು
ಕಾಜ್ಜುಬಿ :ಗೇರು ಬೀಜ
ಕಾಪ್ಪೊಸು :ಹತ್ತಿ
ಕಾವುಳೊ : ಕಾಗೆ
ಕಾರೆತ :ಹಾಗಲಕಾಯಿ
ಕಾಳಿಂಬಿ : ಮಳೆ ಬರುವ ಮುಂಚೆ ಕವಿಯುವ ಕತ್ತಲು
ಕಾಳೊಖು :ಕತ್ತಲೆ
ಕವುಳಾಸವೆಚ: ನಿರ್ಮಾಲ್ಯ ಇತ್ಯಾದಿಗಳನ್ನು ಯಾವುದಾದರೂ ಗಿಡದ ಬುಡದಲ್ಲಿ ವಿಸರ್ಜಿಸುವುದು.
ಕಾಮ :ಕೆಲಸ
ಕಾಮ್ಮಾಚಿ : ಕೆಲಸದವಳು
ಕಾನು :ಕಿವಿ
ಕಾವುಳೇಸು : ಕಾಗೆಗೆ ನೀಡುವ ನೈವೇದ್ಯ
ಕಾಸ :ಕಚ್ಚೆ
ಕಾಲಿ :ನಿನ್ನೆ
ಕಾಂಡುವ್ವೆಚ : ತುರಿಸುವುದು
ಕಾಯ್ಯೆಕ : ಏನೂ

ಕಿಲ್ಲಾ :ಯಾಕೆ

ಕಿರ್ಡುವ : ಹಾವು
ಕಿತ : ಏನು
ಕಿಲ್ಲಾ :ಯಾಕೆ
ಕೀಚು. : ಅಂಟು

ಕೆತ್ತಿ :ಎಷ್ಟು

ಕುಡ್ಬುದ್ಧಿ : ಕೆಟ್ಟ ಬುದ್ಢಿ
ಕುಮಾಂತ್ರ: ಮಾವಿನ ಹಣ್ಣಿನ ರಸವನ್ನು ಒಣಗಿಸಿ ಮಾಡುವ ವಸ್ತು
ಕುಸ್ಸಕ :ಕೊಳೆತ
ಕೆತ್ತಿ :ಎಷ್ಟು
ಕೆಡ್ವೋಳಾ: ಎಷ್ಟು ಹೊತ್ತಿಗೆ
ಕೇ :ಎಲ್ಲಿ
ಕೇಂಧಾಲಾ:ಎಲ್ಲಿಗೆ
ಕೇಸ :ಕೂದಲು
ಕೇರು :ಕಸ



ಕೈಲಾಥೊ : ದೋಸೆ ಎಬ್ಬಿಸುವ ಸೌಟು
ಕೈಮರ್ಗಿ: ಹಿಡಿಯುಳ್ಳ ಪಾತ್ರೆ
ಕೊಹೆಳೊ :ಕುಂಬಳಕಾಯಿ
ಕೊವೆಳ :ಎಳೆಯ
ಕೋಶಿಂಬ್ರಿ :ಕೋಸಂಬರಿ
ಕೊಂಣ್ತೆಗ್ಡಾ :ಯಾವ ಕಡೆ
ಕೋಂಬು : ಕಣಿಲೆ, ಎಳೆ ಬಿದಿರು
ಕೊಣ್ಹಿ :ಯಾರು
ಕೊಇತಿ : ಕತ್ತಿ



ಖರ್ಭರಿತ :ದೊರಗು
ಖಲ್ವಾಟ : ಸಾಣೆ ತಲೆ
ಖಣ : ರವಿಕೆಯ ಬಟ್ಟೆ( ನಾ) , ಅಗೆಯು (ಕ್ರಿ)

ಖರ್ವಡವೆಚ :ಕೆರೆಯುವುದು
ಖರೊಕ್ಕಾವ್ವೆಚ : ತುರಿಕೆ
ಖಾ :ತಿನ್ನು
ಖಾಖ : ಕಂಕುಳು
ಖಾಯಿವೆಚ :ತಿನ್ನುವುದು
ಖಾಸಾ:ಖಾಸಾ
ಖಾಲ್ಲ* :ಹಾಸಿಗೆ
ಖಾತ :ಕೊಳೆ
ಖೀರಿ :ಪಾಯಸ
ಖಬ್ರಿ : ಪಟ್ಟಾಂಗ
ಖುಳ್ಖುಳಾವ್ವೆಚ :ಮುಕ್ಕಳಿಸುವುದು

ಖೂಣ :ಗುರುತು,ಪರಿಚಯ
ಖೂಳ :ಹುಚ್ಚು
ಖೂಳೊ :ಹುಚ್ಚ ,ಖುಳಿ :ಹುಚ್ಚಿ
ಖೊಬ್ಬರ: ಕೊಬ್ಬರಿ
ಖೊಖ್ಖುಲೊ:ಕೆಮ್ಮು
ಖೋಟ :?
ಖೇಳು :ಆಟ


ಗಹ್ರ್ವಾರಿ : ಬಸುರಿ
ಗರೊ: ಹಲಸಿನ ಹಣ್ಣಿನ ಸೊಳೆ( ಗರೆ : ಪುಲ್ಲಿಂಗ)
ಗಡೂಸು :ಬುದ್ಧಿವಂತ ಗಡೂಶಿ ( ಸ್ತ್ರೀ) ,ಗಡೂಸ ( ನ)
ಗಳೊ :ಕುತ್ತಿಗೆ
ಗಾಳಿ :ಬೈಗುಳ
ಗಾಯಿ :ದನ
ಗಾಂಡಿ :ಅಂಡು
ಗಾಯಿರ :ಆಲಿಕಲ್ಲು
ಗಾಜಿ : ಗುಡುಗು
ಗಾಡ್ಢವ :ಕತ್ತೆ
ಗೋರು :ಪಶು
ಗೋರ : ಬಿಳಿ
ಗಾವು :ಊರು
ಗಾಗ್ಗುರಿ :ತರಾತುರಿ
ಗೂಣು :ಗುಣ


ಘರ :ಮನೆ
ಘರಣ :ಮನೆತನ
ಘರಿಘವ್ಣಿ: ಗೃಹಪ್ರವೇಶ
ಘನಘಡಿತ :ಗಟ್ಟಿಮುಟ್ಟು
ಘಣ :ದಪ್ಪ
ಘಸ್ರವೆಚ :dont know exact kannada word for this..pls suggest
ಘಾಘ್ಘರಿ :ಗೆಜ್ಜೆ
ಘಾಮು:ಬೆವರು
ಘಾಮ್ಮೆಳ:ಬೆವರುಸಾಲೆ
ಘಾವನ :ದೋಸೆ
ಘಾಸು:ತುತ್ತು


ಘಾಲ್ಲವೆಚ :ಹಾಕುವುದು
ಘಾಣಿ :ವಾಸನೆ
ಘಾಣಿರ್ಡೊ :ವಾಸನೆಯುಳ್ಳವನು , ಘಾಣಿರ್ಡಿ : ವಾಸನೆಯುಳ್ಳವಳು
ಘಾಸ್ಸವೆಚ :ತೊಳೆಯುವುದು
ಘೇ : ತೆಗೆದುಕೊ , ಎತ್ತಿಕೊ
ಘೋರವೆಚ :ಗೊರಕೆ ಹೊಡೆಯುವುದು

ಪ, ಫ ,ಬ ,ಭ, ಮ

ಪಳಾ :ನೋಡು
ಪಳಾವ್ವೆಚ :ನೋಡುವುದು
ಪತ್ರಿ : ದೇವರ ಪೂಜೆಗೆ ಬೇಕಾದ ಹೂವು,ಎಲೆಗಳು ಇತ್ಯಾದಿ.
ಪರ್ಮೊಳು :ಸುವಾಸನೆ
ಪಣೊಸು : ಹಲಸಿನ ಹಣ್ಣು
ಪಡ್ಸಲ
ಪಡ :ಬೀಳು
ಪರ್ವಾ :ನಾಡಿದ್ದು
ಪಕ್ಷಾ : ಕ್ಕಿಂತ ( ತೇ ಪಕ್ಷಾ : ಅದಕ್ಕಿಂತ )
ಪಸುಂಗುರಿ : ತಂಬುಳಿ



ಪಾನ :ಎಲೆ
ಪಾಟು :ಕಾಲುವೆ
ಪಾತ್ತಳ : ತೆಳು
ಪಾವೊಸು :ಮಳೆ
ಪಾಣಿ : ನೀರು
ಪಾಣಿ ಜಾವೈಶಿ :ಅಳಿಯನ ಸಹೋದರ
ಪಾಳಣೊ :ತೊಟ್ಟಿಲು
ಪಾಪ್ಪೊಡು :ಹಪ್ಪಳ
ಪಾಹಂತಾ :ಬೆಳಗ್ಗೆ
ಪಾಹಂತ್ಪಟಿ : ನಸುಕು
ಪಾಂಗುರ್ಣ :ಹೊದಿಕೆ
ಪಾಠಿ :ಬೆನ್ನು
ಪಾಯಿ :ಕಾಲು (ನಾಮಪದ ), ಕಳಿಸು ( ಕ್ರಿಯಾಪದ)
ಪಾವು : ಪಾವು ( ಒಂದು ಅಳತೆಯ ಸಾಧನ )
ಪಾದು :ಹೂಸು (ಶಬ್ದ ಸಹಿತ)
ಪಾರಾಯಿ : ಸಬ್ಬಲು , ಭೂಮಿ ಅಗೆಯಲು ಬಳಸುವ ಉದ್ದನೆಯ ಉಪಕರಣ
ಪಾವುಠಣ :ಮೆಟ್ಟಲು
ಪಾಖ್ಖಿರು :ಹಕ್ಕಿ
ಪಾಯಿಂಗೊತ್ತಾ:ಕಾಲಿನ ಹತ್ತಿರ
ಪಾಯಿಖಾನೊ : ಸಂಡಾಸು
ಪಾಣ್ಯಾರಿ:ಸಂಡಾಸಿಗೆ ಹೋಗುವುದು
ಪಾಹೊಣಿ :ನೆಂಟರು
ಪಾಠು :ಪಾಠ
ಪಾಳುಕ :ಬಸವನ ಹುಳ
ಪಾರಾಯಣ :ದೇವರ ಪಾರಾಯಣ,ಪೂಜೆ







ಪೋಳ್ಯೊ : ಹೋಳಿಗೆ
ಪುನ್ನವ :ಹುಣ್ಣಿಮೆ
ಪೇಢಿ :ಜಗಲಿ
ಪೇರ :ಸೀಬೇ ಹಣ್ಣು
ಪೆಂಖಟ :ಸೊಂಟ
ಪೆಲ್ಲೊ :ಲೋಟ



ಪುಡ :ಮುಂದೆ
ಪುಯಿಶಿರೆ :ಉಪ್ಪಿನಲ್ಲಿ ಹಾಕಿಟ್ಟ ಹಲಸಿನ ತೊಳೆಯಲ್ಲಿ ಉಂಟಾಗುವ ಹುಳ
ಪುಢ್ಲೆ ದಾರ :ಮುಂಬಾಗಿಲು
ಪುರುಷು : ಪುರುಷ
ಪುರ್ಸತಿ :ಪುರುಸೊತ್ತು

ಪೊಖ್ಖೊರು :ತೂತು

ಪೊಪ್ಫಳ :ಅಡಿಕೆ

ಪೀ :ಕುಡಿ


ಪೈಸೆ :ದುಡ್ಡು


ಪೋಟ: ಹೊಟ್ಟೆ
ಪೋರು :ಸಣ್ಣ ಹುಡುಗ
ಪೋರಿ :ಸಣ್ಣ ಹುಡುಗಿ
ಪೋಹು :ಅವಲಕ್ಕಿ
ಪೋಳಿ :ಹೋಳಿಗೆ
ಪಿವುಣೊಸು :ಹೆಬ್ಬಲಸು


ಫಟಿ :ಸುಳ್ಳು
ಫಳಿ :ಮುಚ್ಚುವುದ್, ಮರದ ಹಲಗೆ
ಫಳ :ಹಣ್ಣು
ಫರ್ಕಾ :ಹರಕೆ
ಫಳಾರು :ಉಪಹಾರ

ಫಾಳುಕೊ :ಬಾಳೆ ಎಲೆ ( ಸಣ್ಣದಾಗಿ ಕತ್ತರಿಸಿದ್ದು )

ಫಾಟ್ಟವೆಚ : ಹರಿಯುವುದು
ಫೂಲ :ಹೂವು
ಫುಟ್ಟವೆಚ :ಒಡೆಯುವುದು
ಫುಸ್ಕಿ: ಹೂಸು(ಶಬ್ದ ರಹಿತ)
ಫುಲ್ಲದಾಡಿ :ಹೂ ಗಿಡ
ಫುಲ್ಲವೆಚ :ಅರಳುವುದು
ಫುರ್ನ್ ಗುಲಿ : ಅರಳು ( ಲಾಯ್ಯೊ )
ಫೂಂಕ :ಊದು
ಫೇಣು: ನೊರೆ
ಫೋಡಿ :ಅಡಕೆಯ ಚೂರು,ಬಜ್ಜಿ


ಬಾಗ್ಗಡೊ : ಜಿರಳೆ
ಬಾಳ :ಮಗು
ಬಾಳಗಿ : ಜೋಪಾನ ಮಾಡು
ಬೇಸ :ಕುಳಿತುಕೊ
ಬೆಟ್ಟೊ :ಅಡಿಕೆ ( ಸುಲಿದದ್ದು)
ಬಾಹೆರ್ಜಾಣ :ಭೇದಿ
ಬುರ್ ಮ್ ಬ : ಮೊಡವೆ
ಬೊಮ್ಮಾರಿ : ಬೊಬ್ಬೆ ಹಾಕು
ಬೊಯ್ಯೊ : ಹೋಳು
ಬೋಬ :ಬೊಬ್ಬೆ
ಬೋಂಕಿ : ಹೊದಿಕೆಯನ್ನು ಪೂರ್ತಿಯಾಗಿ ಹೊದ್ದಿರುವುದು
ಬೊಂಬಿ : ಹೊಕ್ಕಳು

ಭಾಂಡಣ : ಜಗಳ
ಭುಬ್ಭಟ : ಅಸ್ತವ್ಯ ಸ್ತ
ಭೂಯಿ :ಭೂಮಿ
ಭೋವ :ತಿರುಗು
ಭೂಖ :ಹಸಿವು
ಭಾಂತಾರೊ: ಮುದುಕ
ಭಾಂತಾರಿ :ಮುದುಕಿ
ಬೊಡ್ಯೊ : ಮಗ, ಹುಡುಗ
ಬಯ್ಯಾಕೊ : ಹೆಂಡತಿ
ಭರಾನಾ : ವೇಗವಾಗಿ
ಭೂತ :ಭೂತ
ಬಾಂಧ :ಕಟ್ಟು
ಭಾತು :ಅನ್ನ
ಭೀವಯೊ:ಹುಬ್ಬು


ಮನುಶ್ಯು :ಮನುಷ್ಯ
ಮಸ್ತ :ಬಹಳ
ಮಗ :ಮತ್ತೆ
ಮಘ :ಸೌತೆ (ಮಂಗಳೂರು ಸೌತೆ )
ಮ್ಹಣ : ಹೇಳು
ಮಣು : ಮಣ ( ಒಂದು ರೀತಿಯ ಅಳತೆ)

ಮಾಂಕೊಡು :ಮಂಗ
ಮಾಂಟ :ಮಾಟ
ಮಾಗ್ಗಿಲ್ದ್ರಾರ :ಹಿಂಬಾಗಿಲು
ಮಾರವೆಚ :ಹೊಡೆಯುವುದು
ಮಾರು :ಪೆಟ್ಟು
ಮಾಲಾ :ನನಗೆ
ಮಾಳ :ಮಾಲೆ,ಒಂದು ಊರಿನ ಹೆಸರು
ಮಾಳು :ಅಟ್ಟ
ಮಾಜ್ಜೆರ :ಬೆಕ್ಕು
ಮಾಥ್ಥ :ಹೆಂಗಸರ ತಲೆ
ಮಾಗ್ಗಿಣ :ಹಿಂದೆ
ಮಾನ್ಚ್ಹಿ: ವಸ್ತುಗಳನ್ನು ಒಣಗಿಸಲು ಮಾಡಿದ ಅಟ್ಟಳಿಗೆ
ಮಾನ್ಸೊ : ಮೀನು
ಮಾಗ್ಗವೆಚ: ಬೇಡುವುದು
ಮಾತ್ತವೆಚ : ಮದವೇರುವುದು

ಮಿರ್ಸಾಂಗ: ಮೆಣಸು
ಮೀಠ :ಉಪ್ಪು
ಮೀರ್ಯ: ಕರಿಮೆಣಸು
ಮೊಗ್ಗರ :ಮಲ್ಲಿಗೆ
ಮೇ :ನಾನು


ಮೋಳು : ಕಿವಿ ಕಸ

ಮುರ್ಕುಟಿ :ನುಸಿ
ಮುತ್ತು :ಮೂತ್ರ
ಮುಗ್ಗಾನ್ಚಿದಾಳಿ :ಹೆಸರು ಬೇಳೆ
ಮುನ್ಗಿ : ಇರುವೆ